News @ your fingertips
News @ your fingertips
ಬುಧವಾರ ಸಂಭವಿಸಿದ ಅವಳಿ ಭೂಕಂಪದ ಬಳಿಕ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮತ್ತು ನೆರೆಯ ಕರಾವಳಿ ರಾಜ್ಯವಾದ ಲಾ ಗುವೈರಾದಲ್ಲಿ ಸೋಮವಾರ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ.
ಬುಧವಾರದ ಭೂಕಂಪ ದುರ್ಘಟನೆಯಲ್ಲಿ ಕನಿಷ್ಠ 1,450 ಜನರು ಸಾವನ್ನಪ್ಪಿದ್ದು , ಸಾವಿರಾರು ಜನರು ಗಾಯಗೊಂಡಿದ್ದರು. ಇದಾದ ಸುಮಾರು ಐದು ದಿನಗಳ ನಂತರ ಸೋಮವಾರ ಸ್ಥಳೀಯ ಸಮಯ ಬೆಳಿಗ್ಗೆ 7:00 ಗಂಟೆ ಹೊತ್ತಿಗೆ ಈ ಭೂಕಂಪ ಅನುಭವಕ್ಕೆ ಬಂದಿದೆ.
ಒಂದೆರಡೆ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿಯುತ್ತಿದ್ದಂತೆ ಮತ್ತೆ ಕಟ್ಟಡಗಳು ನಡುಗುತ್ತಿವೆ ಎಂದು ಕ್ಯಾರಕಾಸ್ ನಿವಾಸಿಗಳು ತಿಳಿಸಿದ್ದಾರೆ.
ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಭೂಕಂಪ 4.6 ತೀವ್ರತೆ ಹೊಂದಿತ್ತು.ಈ ಘಟನೆಯಿಂದ ಯಾವುದೇ ತಕ್ಷಣದ ಹಾನಿ ವರದಿಯಾಗಿಲ್ಲ ಎಂದು ವೆನೆಜುವೆಲಾದ ರಾಷ್ಟ್ರೀಯ ಅಸೆಂಬ್ಲಿ ಅಧ್ಯಕ್ಷ ಜಾರ್ಜ್ ರೊಡ್ರಿಗಸ್ ಹೇಳಿದ್ದಾರೆ.
ರಕ್ಷಣಾ ತಂಡಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಕುಸಿದಿರುವ ಕಟ್ಟಡಗಳ ಕೆಳಗೆ ಸಿಲುಕಿರುವ ಬದುಕುಳಿದವರನ್ನು ಪತ್ತೆಹಚ್ಚಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದವರು ವಿವರಿಸಿದ್ದಾರೆ.
ಲಾ ಗುವೈರಾ ಅತ್ಯಂತ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದೆ. ಅಲ್ಲಿ ನೂರಾರು ಕಟ್ಟಡಗಳು ಹಾನಿಗೊಳಗಾಗಿವೆ. ತುರ್ತು ಸೇವೆ ಸಿಬ್ಬಂದಿಗಳು ದಿನವಿಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬುಧವಾರ ಉತ್ತರ ವೆನೆಜುವೆಲಾದಲ್ಲಿ ಸಂಭವಿಸಿದ 7.5 ತೀವ್ರತೆಯ ಎರಡು ಭೂಕಂಪಗಳಿಂದ ವ್ಯಾಪಕ ಹಾನಿಗಳಾಗಿವೆ.
More Stories
ಜುಲೈ 1ರಿಂದ ‘ಪುಲ್’ ಸಿಗುತ್ತೆ ಪೆಟ್ರೋಲ್, ಡೀಸೇಲ್
ಬಂಡವಾಳ ಸಂಗ್ರಹಕ್ಕೆ ‘ಯೆಸ್’ ಎಂದ ಯೆಸ್ ಬ್ಯಾಂಕ್
ಉಬರ್ ತ್ಯಜಿಸಿದ ಪ್ರಭ್ಜೀತ್ ಸಿಂಗ್