ಏರ್ಇಂಡಿಯಾದ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ತೆವೋಲ್ಡೆ ಗೆಬ್ರೆಮರಿಯಮ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಅತ್ಯಂತ ಕಠಿಣ ಹಾಗೂ ಜವಾಬ್ದಾರಿಯುತ ಪರಿಸ್ಥಿತಿಯಲ್ಲಿ ತೆವೋಲ್ಡೆ ಗೆಬ್ರೆಮರಿಯಮ್ ಹೊಸ ಹೊಣೆಗಾರಿಕೆ ಹೊತ್ತಿದ್ದಾರೆ.
ಏರ್ಇಂಡಿಯಾದ ನಷ್ಟವು ದುಪ್ಪಟ್ಟಾಗಿದ್ದು , ಕಾರ್ಯಾಚರಣೆಗೆ ಹೆಚ್ಚಿನ ನಗದಿನ ಅಗತ್ಯತೆಯಿದ್ದು , ಷೇರುದಾರರು ಮತ್ತಷ್ಟು ಬಂಡವಾಳ ಹೂಡಬೇಕಾದ ಸವಾಲಿನ ಸಮಯವಿದಾಗಿದೆ. ಜೊತೆಯಲ್ಲಿ ಈ ಹಿಂದೆ ಸರ್ಕಾರಿ ಸ್ವಾಮ್ಯದಲ್ಲಿದ್ದ ಈ ವಿಮಾನಯಾನ ಸಂಸ್ಥೆಯ ರೂಪಾಂತರವನ್ನು ವೇಗಗೊಳಿಸುವುದು ಅವರ ಮುಖ್ಯ ಕಾರ್ಯ ಗುರಿಯಾಗಿದೆ. ಕ್ಯಾಂಪ್ಬೆಲ್ ವಿಲ್ಸನ್ ಅವರ ನಂತರ ಅಧಿಕಾರಕ್ಕೆ ಬಂದ ಗೆಬ್ರೆಮರಿಯಮ್ ಅವರು, ಈ ಹಿಂದೆ ಒಂದು ದಶಕಕ್ಕೂ ಹೆಚ್ಚು ಕಾಲ ಇಥಿಯೋಪಿಯನ್ ಏರ್ಲೈನ್ಸ್ ಗ್ರೂಪ್ನ ನೇತೃತ್ವ ವಹಿಸಿದ್ದರು. ಆ ಆಫ್ರಿಕನ್ ವಿಮಾನಯಾನ ಸಂಸ್ಥೆಯ ವಿಮಾನಗಳ ಸಂಖ್ಯೆ, ನೆಟ್ವರ್ಕ್ ಮತ್ತು ವಿಮಾನಯಾನ ಸೇವೆಗಳ ಬೃಹತ್ ವಿಸ್ತರಣೆಯನ್ನು ಯಶಸ್ವಿಯಾಗಿ ಅವರು ಮುನ್ನಡೆಸಿದ್ದರು.
ನೂತನ ಸಿಇಒ ಅವರ ಮುಂದಿರುವ ಸವಾಲುಗಳು
ಸುರಕ್ಷತೆಗೆ ಮೊದಲ ಆದ್ಯತೆ: ತೀವ್ರ ಕಾರ್ಯಾಚರಣೆಯ ಸವಾಲುಗಳು ಮತ್ತು ಅಪಘಾತಗಳ ನಂತರ ಸಾರ್ವಜನಿಕ ನಂಬಿಕೆಯನ್ನು ಮರುಸ್ಥಾಪಿಸಲು ಸಂಸ್ಥೆಯಲ್ಲಿ ಕಟ್ಟುನಿಟ್ಟಾದ ಸುರಕ್ಷತಾ ಸಂಸ್ಕೃತಿಯನ್ನು ಜಾರಿಗೆ ತರುವುದು.
ನಿರ್ವಹಣೆ ಸುಧಾರಣೆ: ಹೊಸ ವಿಮಾನಗಳ ಸೇರ್ಪಡೆಯೊಂದಿಗೆ, ತಾಂತ್ರಿಕ ಅನುಭವವನ್ನು ಬಳಸಿ ವಿಮಾನಗಳ ದುರಸ್ತಿ, ಎಂಜಿನಿಯರಿಂಗ್ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವುದು.
ಹಣಕಾಸಿನ ಶಿಸ್ತು: ಹೆಚ್ಚುತ್ತಿರುವ ನಗದು ವೆಚ್ಚವನ್ನು ನಿಯಂತ್ರಿಸುವುದು ಮತ್ತು ಕಾರ್ಯಾಚರಣೆಯ ನಷ್ಟವನ್ನು ಕಡಿಮೆ ಮಾಡಿ ಟಾಟಾ ಸನ್ಸ್ ಹಾಗೂ ಸಿಂಗಾಪುರ್ ಏರ್ಲೈನ್ಸ್ನ ಮೇಲಿನ ಬಂಡವಾಳದ ಅವಲಂಬನೆಯನ್ನು ತಗ್ಗಿಸುವುದು.
ಆಡಳಿತ ಮತ್ತು ನಾಯಕತ್ವದ ಮರುರಚನೆ: ನಿರ್ವಹಣಾ ರಚನೆಯನ್ನು ಬದಲಾಯಿಸುವುದು, ಜವಾಬ್ದಾರಿಯನ್ನು ಹೆಚ್ಚಿಸುವುದು ಮತ್ತು ದಕ್ಷ ನಾಯಕರನ್ನು ನೇಮಿಸುವುದು.
ದೈನಂದಿನ ಕಾರ್ಯಾಚರಣೆಯ ಸುಧಾರಣೆ: ಸಮಯಕ್ಕೆ ಸರಿಯಾಗಿ ವಿಮಾನಗಳ ಹಾರಾಟ , ಲಗೇಜ್ ನಿರ್ವಹಣೆ ಮತ್ತು ಪ್ರಯಾಣಿಕರ ಸೇವೆಯನ್ನು ಸುಧಾರಿಸುವುದು
News @ your fingertips
More Stories
ನೇಪಾಳ ಪ್ರವಾಹ , ಸತ್ತವರ ಸಂಖ್ಯೆ ಹೆಚ್ಚಳ
5 ನಿಮಿಷದಲ್ಲಿ 6 ರೂ.ಯಿಂದ 1000 ರೂ.ಗಳಿಗೆ ಜಗಿದ ಬ್ಯಾಂಕೆಕ್ಸ್ ‘ಪುಟ್ ‘
ಸುಭಾಷ್ಚಂದ್ರಗೆ ಬಿಗ್ ರಿಲೀಫ್ , ಕೇವಲ 6.5 ಕೋ .ಸಾಲ ಪಾವತಿಗೆ ಸಮ್ಮತಿ