7 rupees

News @ your fingertips

ಮಧ್ಯಪ್ರಾಚ್ಯ ಬಿಕ್ಕಟ್ಟು , ಮತ್ತೆ 105 ಡಾಲರ್‌ಗೆ ತೈಲ

ಮಧ್ಯ ಪ್ರಾಚ್ಯದಲ್ಲಿನ ಬಿಕ್ಕಟ್ಟು ಜಾಗತಿಕ ತೈಲ ಪೂರೈಕೆಯಲ್ಲಿ ಒಂದಿಷ್ಟು ಸವಾಲುಗಳನ್ನು ಸೃಷ್ಟಿಸುತ್ತಿದೆ. ಪ್ರಮುಖ ಮಧ್ಯಪ್ರಾಚ್ಯ ಸಾಗಣಾ ಮಾರ್ಗಗಳಲ್ಲಿ ಹೆಚ್ಚುತ್ತಿರುವ ದಾಳಿಗಳು ಮತ್ತು ಅಡಚಣೆಗಳಿಂದಾಗಿ ಗುರುವಾರ (ಸೆಪ್ಟೆಂಬರ್10 ರಂದು ) ಕಚ್ಚಾ ತೈಲ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 105 ಡಾಲರ್ ಗಡಿ ದಾಟಿದೆ.
ಯೆಮೆನ್‌ನ ಕೆಂಪು ಸಮುದ್ರದ ನಗರವಾದ ಮೊಚಾದ ನಿಯಂತ್ರಣವನ್ನು ಇರಾನ್ ಬೆಂಬಲಿತ ಹೌತಿ ಬಂಡುಕೋರರು ವಶಪಡಿಸಿಕೊಂಡಿದ್ದಾರೆ ಎಂದು ಯೆಮೆನ್ ಸರ್ಕಾರಿ ಮೂಲಗಳು ರಾಯಟ್ ವಾರ್ತಾ ಸಂಸ್ಥೆಗೆ ತಿಳಿಸಿವೆ. ಈ ಬೆಳವಣಿಗೆಯಿಂದ ಹೌತಿಗಳು ಕಾರ್ಯತಂತ್ರದ ಪ್ರಮುಖವಾದ ಬಾಬ್ ಎಲ್-ಮಂಡೆಬ್ ಜಲಸಂಧಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ ಎಂದು ಮೂಲಗಳು ವಿವರಿಸಿವೆ.
ಈ ಪ್ರದೇಶದಲ್ಲಿ ಟ್ಯಾಂಕರ್ ಮೇಲಿನ ದಾಳಿಗಳು ತೀವ್ರಗೊಂಡಿದ್ದು, ಹಾರ್ಮುಜ್ ಜಲಸಂಧಿಯ ಮೂಲಕದ ಸಂಚಾರವು ನಿರ್ಬಂಧಿತವಾಗಿ ಮುಂದುವರಿದಿದೆ.
ಅಂತಾರಾಷ್ಟ್ರೀಯ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲವು ಸುಮಾರು 5 ಡಾಲರ್‌ಗಳಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 106 ಡಾಲರ್‌ಗಳ ಆಸುಪಾಸಿಗೆ ತಲುಪಿದೆ. ಇದು ಮೇ 22 ರ ನಂತರದ ಅತ್ಯಂತ ಗರಿಷ್ಠ ಮಟ್ಟವಾಗಿದ್ದು, ಸತತ ಐದನೇ ದಿನವೂ ಏರಿಕೆ ಮುಂದುವರಿದಿದೆ. ಅಮೆರಿಕಾದ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 4.50 ಡಾಲರ್‌ಗಳಷ್ಟು ಜಿಗಿದು 95.39 ಡಾಲರ್‌ಗಳಿಗೆ ತಲುಪಿದೆ.