7 rupees

News @ your fingertips

ಜುಲೈ 1ರಿಂದ ‘ಪುಲ್’ ಸಿಗುತ್ತೆ ಪೆಟ್ರೋಲ್, ಡೀಸೇಲ್

ನಿರ್ಬಂಧ ತೆಗೆದು ಹಾಕಿದ ಕೇಂದ್ರ ಸರಕಾರ

ಜುಲೈ 1 (ಬುಧವಾರ) ರಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕಲು ಕೇಂದ್ರ ಸರಕಾರ ನಿರ್ಧರಿಸಿದೆ.
ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಪರಿಸ್ಥಿತಿಯಿಂದಾಗಿ ಇಂಧನ ಪೂರೈಕೆ ಕೊರತೆ ಕಾರಣಕ್ಕೆ ತುರ್ತು ಕ್ರಮವಾಗಿ ಚಿಲ್ಲರೆ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ಪೆಟ್ರೋಲ್ , ಡೀಸಿಲ್ ಖರೀದಿಗೆ ಮಿತಿಗಳನ್ನು ವಿಧಿಸಿ ಸರಕಾರ ಅದೇಶಿಸಿತ್ತು.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (ಪಿಎನ್‌ಜಿ) ಈಗ ಹೊರಡಿಸಿರುವ ಆದೇಶದ ಪ್ರಕಾರ, ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ.
ಚಿಲ್ಲರೆ ಇಂಧನ ಕೇಂದ್ರಗಳಲ್ಲಿ ಒಂದು ವಾಹನಕ್ಕೆ ದಿನಕ್ಕೆ 200 ಲೀಟರ್ ಡೀಸೆಲ್ ಮಾರಾಟದ ಮಿತಿಯನ್ನು ವಿಧಿಸಲಾಗಿತ್ತು .ಅದನ್ನು ಸಡಿಲಿಸಿದ್ದು , ಜುಲೈ 1ರಿಂದ ಅಗತ್ಯವಿರುವಂತೆ ಮಿತಿಯಿಲ್ಲದೆ ಡೀಸೆಲ್ ಖರೀದಿಸಬಹುದಾಗಿದೆ.
ಚಿಲ್ಲರೆ ಇಂಧನ ಕೇಂದ್ರಗಳಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ತಮ್ಮದೇ ಆದ ಗ್ರಾಹಕ ಪಂಪ್‌ಗಳಿಂದ ಇಂಧನವನ್ನು ಪಡೆಯುವುದಕ್ಕೆ ಸೀಮಿತವಾಗಿಲ್ಲ.
ಸಚಿವಾಲಯದ ಪ್ರಕಾರ, ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ತೃಪ್ಪಿಕರವಾಗಿದೆ. ಹಾಗಾಗಿ
ಜುಲೈ 1 ರಿಂದ ಜಾರಿಗೆ ಬರುವಂತೆ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವುದು ದೇಶೀಯ ಪೂರೈಕೆ ಪರಿಸ್ಥಿತಿಯಲ್ಲಿ ಸುಧಾರಣೆ ಮತ್ತು ಸಾಮಾನ್ಯ ಇಂಧನ ವಿತರಣಾ ವ್ಯವಸ್ಥೆಗಳ ಪುನಃಸ್ಥಾಪನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.
ಯುದ್ದ ಪರಿಸ್ಥಿತಿ ಸಮಯದಲ್ಲಿ ಇಂಧನ ಪೂರೈಕೆಯಲ್ಲಿನ ವ್ಯತ್ಯಯದಿಂದ ಅನಗತ್ಯ ಇಂಧನ ಕೊರತೆ ಸೃಷ್ಟಿಯಾಗುವ ಸಾಧ್ಯತೆಗಳಿದ್ದು , ಕಪ್ಪು ಮಾರುಕಟ್ಟೆಗೂ ಅವಕಾಶ ಕಲ್ಪಿಸುವುದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರಕಾರ ಇಂತಹ ನಿರ್ಬಂಧಗಳನ್ನು ಹೇರಿತ್ತು. ಈಗ ಚಿಲ್ಲರೆ ಗ್ರಾಹರು ಹಾಗೂ ಎಲ್ಲಾ ವರ್ಗದ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸೆಲ್‌ನ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.