News @ your fingertips
News @ your fingertips
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ( ಎಂಆರ್‌ಪಿಎಲ್)ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ (ಯೋಜನೆಗಳು) ಬಿ.ಎಚ್.ವಿ. ಪ್ರಸಾದ್ ಒಪಿಎಎಲ್ ( ಒಎನ್‌ಜಿಸಿ ಪೆಟ್ರೋ ಅಡಿಷನ್ಸ್ ಲಿಮಿಟೆಡ್ )ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇಂಧನ ವಲಯದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಪ್ರಸಾದ್ 1993 ರಲ್ಲಿ ಎಂಆರ್‌ಪಿಎಲ್ ಸೇರಿದ್ದರು. 2026 ಮೇ.31ರಂದು ಕಾರ್ಯನಿರ್ವಾಹಕ ನಿರ್ದೇಶಕ (ಯೋಜನೆಗಳು) ಆಗಿ ನಿವೃತ್ತರಾಗಿದ್ದರು.ಈ ಅವಧಿಯಲ್ಲಿ ಪ್ರಸಾದ್ ಯೋಜನೆಗಳು, ಮಾರ್ಕೆಟಿಂಗ್, ಮಾನವ ಸಂಪನ್ಮೂಲಗಳು, ಕಾರ್ಪೊರೇಟ್ ಕಾರ್ಯತಂತ್ರ ಮತ್ತು ಇತರ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮಣಿಪಾಲದ ಎಂಐಟಿಯಿಂದ ಮೆಕ್ಯಾನಿಕಲ್ ಪದವಿ ಪಡೆದಿರುವ ಪ್ರಸಾದ್, ಎಂಆರ್‌ಪಿಎಲ್‌ನಲ್ಲಿ ಸಂಸ್ಕರಣಾಗಾರ (ವಿಸ್ತರಣೆ ಮತ್ತು ಉನ್ನತೀಕರಣ, ಯೋಜನೆಯ ಕಾರ್ಯಗತಗೊಳಿಸುವಿಕೆ ಮತ್ತು ಕಾರ್ಯತಂತ್ರದ ಮೂಲಸೌಕರ್ಯದ ಅಭಿವೃದ್ಧಿ ಸೇರಿದಂತೆ ಹಲವಾರು ಪ್ರಮುಖ ಕಾರ್ಯಯೋಜನೆಗಳಲ್ಲಿ ಭಾಗಿಯಾಗಿದ್ದರು.
ಗುಜರಾತ್‌ನ ದಹೇಜ್‌ನಲ್ಲಿರುವ ಒಎನ್‌ಜಿಸಿ ಸಮೂಹದ ಪ್ರಮುಖ ಸಂಯೋಜಿತ ಪೆಟ್ರೋಕೆಮಿಕಲ್ ಕಂಪನಿಯಾದ ಒಪಿಎಎಲ್ ಈಗ ಮುನ್ನಡೆಸಲಿದ್ದಾರೆ.
More Stories
ಅಮಿತ್ ಷಾ ವಜಾಕ್ಕೆ ರಾಹುಲ್ ಆಗ್ರಹ
ಉತ್ತರ ಭಾರತ ಭಾರಿ ಮಳೆಯ ಎಚ್ಚರಿಕೆ
ವೆನಿಜುವೆಲಾ ಮತ್ತೆ ಕಂಪನ