News @ your fingertips
News @ your fingertips
ನೀಟ್ ಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಜುಲೈ 20 ರಂದು ದೆಹಲಿಯಲ್ಲಿ ನಡೆದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗಕ್ಕೆ ಮಾಡಲಾಗಿದೆ. ಇದಕ್ಕೆ ಗೃಹ ಸಚಿವ ಅಮಿತ್ ಷಾ ಅವರೇ ನೇರ ಕಾರಣ.ಈ ಕುರಿತ ಹೊಣೆಗಾರಿಕೆಯನ್ನು ಸ್ಪಷ್ಟಪಡಿಸಬೇಕು ಎಂದು ವಿರೋಧ ಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಒತ್ತಾಯಿಸಿದರು.
ಪೊಲೀಸ್ ಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪದಚ್ಯುತಗೊಳಿಸಬೇಕು ಮತ್ತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಅಗ್ರಹ ಮಾಡಿದರು.
ನೀಟ್ ಪರೀಕ್ಷೆ ಹಾಗೂ ಬಳಿಕ ಘಟನೆಗಳ ಕುರಿತಂತೆ ಲೋಕಸಭೆಯಲ್ಲಿ ನಡೆದ ಗದ್ದಲದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ , ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದಕ್ಕೆ ಯಾವುದೇ ಸ್ಪಷ್ಟ ಕಾರಣಗಳನ್ನು ನೀಡುತ್ತಿಲ್ಲ. ಗೃಹ ಸಚಿವರು ಮಾಡಿರುವ ತಪ್ಪಿಗೆ ಕ್ರಮ ಜರಗಿಸುವ ಅಗತ್ಯವಿದೆ ಎಂದು ವಾದಿಸಿದರು.
ನಾನು ಕೇವಲ ಒಂದು ಪ್ರಶ್ನೆಯನ್ನು ಕೇಳಿದ್ದೇನೆ. ಕೇವಲ ಎರಡು ಸಾಧ್ಯತೆಗಳಿರಬಹುದು. ಒಂದೇ ಗೃಹ ಸಚಿವರು ಗುಂಡು ಹಾರಿಸಲು ಆದೇಶಿಸಿದ್ದಾರೆ ಅಥವಾ ಗುಂಡು ಹಾರಿಸಲಾಗುತ್ತಿದೆ ಎಂದು ಅವರಿಗೆ ತಿಳಿದಿರಲಿಲ್ಲ. ಮೊದಲ ಪ್ರಕರಣದಲ್ಲಿ, ಅವರು ತಪ್ಪಿತಸ್ಥರು. ಎರಡನೆಯದರಲ್ಲಿ, ಅವರು ಅಸಮರ್ಥರು. ಮೂರನೇ ಸಾಧ್ಯತೆಗಳಿಗೆ ಅವಕಾಶ ಇಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದರು.
More Stories
ಮಧ್ಯಪ್ರಾಚ್ಯ ಬಿಕ್ಕಟ್ಟು , ಮತ್ತೆ 105 ಡಾಲರ್ಗೆ ತೈಲ
ಪ್ರಸಾದ್ ಒಪಿಎಎಲ್ ನೂತನ ಎಂಡಿ
ಉತ್ತರ ಭಾರತ ಭಾರಿ ಮಳೆಯ ಎಚ್ಚರಿಕೆ