News @ your fingertips
News @ your fingertips
ಕರ್ಣಾಟಕ 2026ರ ಜೂನ್ ತ್ರೈವಾಸಿಕದಲ್ಲಿ ಬ್ಯಾಂಕ್ 418.95 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2025ರ ಜೂನ್ 30ಕ್ಕೆ ಕೊನೆಗೊಂಡ ತ್ರೈವಾಸಿಕದ 292.40 ಕೋಟಿ ರೂ.ಗಳಿಗೆ ಹೋಲಿಸಿದರೆ, ಶೇ.43ರಷ್ಟು ಹೆಚ್ಚಳವಾಗಿದೆ. ಇದು ಸಾರ್ವಕಾಲಿಕ ದಾಖಲೆ.
ಬ್ಯಾಂಕ್ನ ಒಟ್ಟು ಠೇವಣಿ 2026ರ ಜೂನ್ವರೆಗೆ 1,10,396.41 ಕೋಟಿ ರೂ.ಗಳು.2025ರ ಜೂನ್ನಲ್ಲಿದ್ದ 1,03,242.17 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ.7ರಷ್ಟು ವಾರ್ಷಿಕ ಪ್ರಗತಿ ಸಾಧಿಸಿದೆ. ಚಿಲ್ಲರೆ ಅವಧಿ ಠೇವಣಿಗಳು 2025ರ ಜೂನ್ನಲ್ಲಿದ್ದ 65,786.24 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ.6ರಷ್ಟು ವಾರ್ಷಿಕ ಪ್ರಗತಿಯೊಂದಿಗೆ 69,410.29 ಕೋಟಿ ರೂ.ಗಳಿಗೆ ಏರಿದೆ.
ಒಟ್ಟು ಮುಂಗಡಗಳು 86,610.21 ಕೋಟಿ ರೂ.ಗಳಿಗೆ ತಲುಪಿದ್ದು, ಹಿಂದಿನ ಅವಧಿಯ 74,267.02 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ.17ರಷ್ಟು ಪ್ರಗತಿ ದಾಖಲಿಸಿದೆ. ಬ್ಯಾಂಕ್ನ ನಿವ್ವಳ ಬಡ್ಡಿ ವಾರ್ಜಿನ್ ಕಳೆದ ಅವಧಿಯಲ್ಲ್ಲಿದ್ದ ಶೇ.2.82ರಿಂದ ಈ ಬಾರಿಗೆ ಶೇ.3.20ಕ್ಕೆ ಏರಿದೆ. ವಾರ್ಷಿಕವಾಗಿ 38 ಬಿಪಿಎಸ್ ಹೆಚ್ಚಳ ದಾಖಲಿಸಿದೆ ಎಂದು ಬ್ಯಾಂಕ್ ಪ್ರಕಟನೆ ತಿಳಿಸಿದೆ.
ಬುಧವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತ್ರೈಮಾಸಿಕ ಫಲಿತಾಂಶಕ್ಕೆ ಅನುಮೋದನೆ ನೀಡಲಾಗಿದೆ ಎಂದು ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್.ಭಟ್ ಹೇಳಿದ್ದಾರೆ.
More Stories
ಮಧ್ಯಪ್ರಾಚ್ಯ ಬಿಕ್ಕಟ್ಟು , ಮತ್ತೆ 105 ಡಾಲರ್ಗೆ ತೈಲ
ಕ್ಯಾಂಪ್ಕೊ ದಾಖಲೆಯ 3,375 ಕೋಟಿ ವಹಿವಾಟು , ಲಾಭ 49.62 ಕೋಟಿ
ಮತ್ತೆ ಸಂಘರ್ಷ : ಕುಸಿದ ಅಮೆರಿಕಾ ಮಾರುಕಟ್ಟೆ