7 rupees

News @ your fingertips

ಕಂಪೆನಿ ನಿಧಿ ಬಳಕೆ ಇತ್ಯರ್ಥ ಅರ್ಜಿ ತಿರಸ್ಕೃತ

ಕಂಪನಿ ನಿಧಿಗಳ ದುರುಪಯೋಗಕ್ಕೆ ಸಂಬಂಧಿತ ಪ್ರಕರಣದಲ್ಲಿ ಉದ್ಯಮಿ ಅನಿಲ್ ಅಂಬಾನಿ ಮತ್ತು ಅವರ ವ್ಯವಹಾರ ಗುಂಪಿನೊಂದಿಗೆ ಸಂಪರ್ಕ ಹೊಂದಿದ ಕಂಪನಿಗಳು ಸಲ್ಲಿಸಿದ ಇತ್ಯರ್ಥ ಅರ್ಜಿಗಳನ್ನು ಸೆಬಿ ತಿರಸ್ಕರಿಸಿದೆ.
ಈ ವಿಷಯವನ್ನು ಇತ್ಯರ್ಥಪಡಿಸದಿರಲು ಸೆಬಿ ನಿರ್ಧರಿಸಿದೆ, ಅಂದರೆ ತನಿಖೆ ಪ್ರಕ್ರಿಯೆಯ ಮೂಲಕ ಇತ್ಯರ್ಥಗೊಳಿಸಲು ಬಯಸಿದೆ. ರಿಲಯನ್ಸ್ ಎಡಿಎ ಗ್ರೂಪ್‌ನ ವ್ಯವಹಾರಗಳಿಗೆ ಸಂಬಂಧಿತ ಹಣವನ್ನು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಯಿಂದ ಮತ್ತೊಂದು ಕಂಪನಿಯ ವರ್ಗಾಯಿಸಿ ಬಳಿಕ ರವಾನಿಸಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿತ ಪ್ರಕರಣ ಇದಾಗಿದೆ.
ಅಂಬಾನಿ ಗ್ರೂಪ್ ಈ ಆರೋಪಗಳನ್ನು ನಿರಾಕರಿಸಿದೆ. ಜೊತೆಯಲ್ಲಿ ಕಾನೂನು ಮಾರ್ಗಗಳ ಮೂಲಕ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವುದಾಗಿ ಸ್ಪಷ್ಟೀಕರಿಸಿದೆ.
ಕಂಪೆನಿಗಳು ನಡೆಸಿರುವ ಈ ವಹಿವಾಟುಗಳು ಸಾರ್ವಜನಿಕ ಷೇರುದಾರರ ಹಿತಾಸಕ್ತಿಗಳಿಗೆ ಅನುಸಾರವಾಗಿ ಕೈಗೊಂಡ ಕ್ರಮಗಳೇ ? ಅಥವಾ ಸಂಬಂಧಿತ ಸಂಸ್ಥೆಗಳ ಲಾಭಕ್ಕಾಗಿ ನಡೆಸಲಾಗಿದೆಯೇ ಎನ್ನುವುದು ಸೆಬಿ ಎತ್ತಿರುವ ಪ್ರಶ್ನೆ.