News @ your fingertips
News @ your fingertips
ಭಾರತ ಮತ್ತು ದಕ್ಷಿಣ ಏಷ್ಯಾದಾದ್ಯಂತ ಉಬರ್‌ನ ವ್ಯವಹಾರವನ್ನು ಮುನ್ನಡೆಸಿದ್ದ ಪ್ರಭ್ಜೀತ್ ಸಿಂಗ್ ರಾಜೀನಾಮೆ ನೀಡಿದ್ದಾರೆ.
ಉಬರ್‌ನಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ಈಗ ಪದ ತ್ಯಾಗ ಮಾಡಿದ್ದಾರೆ.
2015 ರಲ್ಲಿ ಪ್ರಭ್ಜೀತ್ ಸಿಂಗ್ ಉಬರ್ ಇಂಡಿಯಾವನ್ನು ಜನರಲ್ ಮ್ಯಾನೇಜರ್ ಮತ್ತು ಸ್ಟ್ರಾಟಜಿ ಮುಖ್ಯಸ್ಥರಾಗಿ ಸೇರಿದ್ದರು. 2020 ರಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾಕ್ಕೆ ಅಧ್ಯಕ್ಷರಾಗಿ ನಿಯುಕ್ತಿಗೊಂಡರು. ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಭಾರತದ ಮಾರುಕಟ್ಟೆಗಳಲ್ಲಿ ಉಬರ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದರು.
ಭಾರತ ಮತ್ತು ನೆರೆಯ ಮಾರುಕಟ್ಟೆಗಳಲ್ಲಿ ಉಬರ್ ಕಂಪನಿಯ ಕಾರ್ಯಾಚರಣೆಗಳನ್ನು ವಿಸ್ತರಿಸುವಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಉಬರ್‌ಗೆ ಸೇರುವ ಮೊದಲು ಸಿಂಗ್ ಜಾಗತಿಕ ಸಲಹಾ ಸಂಸ್ಥೆ ಮೆಕಿನ್ಸೆ ಕಂಪನಿ ಮತ್ತು ಹೂಡಿಕೆ ಬ್ಯಾಂಕ್ ಲೆಹ್ಮನ್ ಬ್ರದರ್ಸ್‌ನೊಂದಿಗೆ ಕೆಲಸ ಮಾಡಿದ್ದರು.
ಓಪನ್‌ಎಐ ಭಾರತದಲ್ಲಿ ತನ್ನ ವಿಸ್ತರಣೆಯನ್ನು ಮಾಡುತ್ತಿರುವ ಸಂದರ್ಭದಲ್ಲಿ ಸಿಂಗ್ ಅವರು ಆ ಕಂಪೆನಿಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.
.
More Stories
ಏರುಗತಿಯತ್ತ ಭಾರತ ಅರ್ಥಿಕತೆ ವಿತ್ತೀಯ ಸಂಸ್ಥೆಗಳ ಅಶಾವಾದ
ವಾಣಿಜ್ಯ ಅನಿಲ ಪೂರೈಕೆ ಸಹಜ ಸ್ಥಿತಿಗೆ, ನಿರ್ಬಂಧ ತೆರವು
ಎಮ್ಕ್ಯೂರ್ ಫಾರ್ಮಾದಿಂದ ಹೊರ ಬಂದ ಬೈನ್