7 rupees

News @ your fingertips

ಏರುಗತಿಯತ್ತ ಭಾರತ ಅರ್ಥಿಕತೆ ವಿತ್ತೀಯ ಸಂಸ್ಥೆಗಳ ಅಶಾವಾದ

ಅಮೆರಿಕ-ಇರಾನ್ ನಡುವಿನ ಯುದ್ದ ವಿರಾಮ ಒಪ್ಪಂದವು ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯನ್ನು ತಿಳಿಸುವ ಸಾಧ್ಯಗಳಿದ್ದು , ಮರಳಿ ಶಾಂತಿ ನಲೆಸುವ ಭರವಸೆಯ ಕಾರಣ ಭಾರತದ ಆರ್ಥಿಕತೆಯು ಶೇ 6.5 ರಷ್ಟು ವೇಗವಾಗಿ ವೃದ್ಧಿಸುವ ಸಾಧ್ಯತೆಗಳಿವೆ ವಿತ್ತೀಯ ಸಂಸ್ಥೆಗಳು ಅಂದಾಜಿಸಿವೆ.
ಜಾಗತಿಕ ಹೂಡಿಕೆ ಸಂಸ್ಥೆ ಗೋಲ್ಡ್‌ಮನ್ ಸ್ಯಾಚ್ಸ್ ನ ಸಂಶೋಧನಾ ವಿಭಾಗವು ಭವಿಷ್ಯದ ಜಾಗತಿಕ ಅರ್ಥಿಕ ಸ್ಥಿತಿಗಳನ್ನು ಅಂದಾಜಿಸಿದ್ದು , ಶಾಂತಿ ಒಪ್ಪಂದವೂ ವಿಶ್ವ ಮಟ್ಟದಲ್ಲಿ ಹೊಸ ಅರ್ಥಿಕ ಪ್ರಗತಿಯನ್ನು ನಿರೀಕ್ಷೆ ಮಾಡಿದೆ ಎಂದು ಆಶಾವಾದ ಮಂಡಿಸಿದೆ.
ಇಸ್ರೇಲ್-ಯುಎಸ್ ಮತ್ತು ಇರಾನ್ ನಡುವಿನ ಯುದ್ಧವು ಹಾರ್ಮುಜ್ ಜಲಸಂಧಿ ಮುಚ್ಚುವಿಕೆಗೆ ಕಾರಣವಾದ ಪರಿಣಾಮ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ತೈಲ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಇದು ವಿಶ್ವದೆಲ್ಲೆಡೆ
ಅರ್ಥಿಕ ಸಂಕಷ್ಟಕ್ಕೆ ಎಡೆ ಮಾಡಿಕೊಡುವ ನಿರೀಕ್ಷೆ ಇತ್ತು. ಪರಿಣಾಮವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇ 6.1ಅಸುಪಾಸಿನಲ್ಲಿ ಪ್ರಗತಿ ಸಾಧಿಸಬಹುದು ಎಂದು ಅಂದಾಜಿಸಲಾಗಿತ್ತು.
ಅದರೆ ಇತ್ತೀಚಿನ ದಿನಗಳಲ್ಲಿ ನಡೆದ ಅಶಾದಾಯಕ ಬೆಳವಣಿಗೆಗಳು ಉಭಯ ರಾಷ್ಟ್ರಗಳ ನಡುವೆ ಶಾಂತಿ ಒಪ್ಪಂದದ ಮಾರ್ಗವನ್ನು ತೆರೆದಿದೆ. ಇದು ಹೊಸ ಭರವಸೆಯನ್ನು ಮೂಡಿಸಿದೆ.
ಹಾರ್ಮುಜ್ ಜಲಸಂಧಿ ಮುಚ್ಚಿದ ಕಾರಣಕ್ಕೆ ಕೇವಲ ತೈಲ ಮಾತ್ರವಲ್ಲದೆ , ವಿಶ್ವದೆಲ್ಲೆಡೆ ಸರಕುಗಳ ಪೂರೈಕೆಗಳ ಮೇಲೆ ಭಾರಿ ಪರಿಣಾಮ ಬೀರಿತ್ತು . ತೈಲ ಬೆಲೆ ಏರಿಕೆಯಾದ ಕಾರಣ ಅರ್ಥಿಕತೆ ಹಿಮ್ಮುಖ ಚಲನೆಯತ್ತ ಮುಖ ಮಾಡಿತ್ತು. ಇದೀಗ ಜಲಸಂಧಿ ತೆರೆದಿರುವ ಕಾರಣ ತೈಲ ಬೆಲೆ ಇಳಿಮುಖವಾಗುವ ಎಲ್ಲಾ ಮುನ್ಸೂಚನೆಗಳಿವೆ.ಇದು ಅರ್ಥಿಕತೆ ಏರುಗತಿಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.