ಜಗತ್ತಿನ ಮೊದಲ ‘ಟ್ರಿಲಿಯನೇರ್ ’ ಸ್ಥಾನಮಾನ ಗಳಿಸಿದ ಟೆಸ್ಲಾದ ಮುಖ್ಯಸ್ಥ ಎಲನ್ ಮಸ್ಕ್ ಕಲವೇ ದಿನಗಳಲ್ಲಿ ತನ್ನ ಸ್ಥಾನ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.
ಅಮೆರಿಕ ಮಾರುಕಟ್ಟೆಯಲ್ಲಿ ಎಲನ್ ಮಸ್ಕ್ ಅವರ ಮಾಲಿಕತ್ವದ ಸ್ಪೇಸ್ಎಕ್ಸ್ ಕಂಪೆನಿಯ ಷೇರುಗಳು ಲಿಸ್ಟಿಂಗ್ ಆಗುವ ಹೊತ್ತಿನ ಮಾಡಿದ ಧಮಕಾಅವರನ್ನು ವಿಶ್ವದ ಅತ್ಯಂತ ಶ್ರೀಮಂತ ಎನ್ನುವ ಪಟ್ಟಕ್ಕೇರಿಸಿತು.
ಇದಾದ ಕೆಲವೇ ದಿನಗಳಲ್ಲಿ ಕೆಲವೊಂದು ವರದಿಗಳು ಸ್ಪೇಸ್ಎಕ್ಸ್ ನ ಷೇರುಗಳನ್ನು ತೀವ್ರ ಮಾರಾಟ ಒತ್ತಡಕ್ಕೆ ಸಿಲುಕಿಸಿದವು. ಇದು ಎಲನ್ ಮಸ್ಕ್ ಅವರ ಸಿರಿವಂತಿಕೆ ಇಳಿಕೆಗೆ ನೇರವಾಗಿ ಕಾರಣವಾಯಿತು.ಮಾರುಕಟ್ಟೆಯಲ್ಲಿನ ಒತ್ತಡಕ್ಕೆ ಕೆಲವೇ ದಿನಗಳಲ್ಲಿ 100 ಶತಕೋಟಿಗಿಂತ ಹೆಚ್ಚಿನ ಸಂಪತ್ತಿನ ಇಳಿಕೆಯಾದ ಕಾರಣ ಮಸ್ಕ್ ಮೊನ್ನೆಯಷ್ಟೇ ಸಾಧಿಸಿದ್ದ ಟ್ರಿಲಿಯನೇರ್ ಸ್ಥಾನವನ್ನು ಇಳಿಸಿಕೊಳ್ಳ್ಳಬೇಕಾಯಿತು.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಮಸ್ಕ್ ಅವರ ನಿವ್ವಳ ಮೌಲ್ಯವು ಪ್ರಸ್ತುತ 957 ಶತಕೋಟಿಗಳಷ್ಟಾಗಿದೆ.
ಇತ್ತೀಚಿಗೆಷ್ಟೇ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಸ್ಪೇಸ್ಎಕ್ಸ್ ಷೇರುಗಳು ಸುಮಾರು 3 ಟ್ರಿಲಿಯನ್ ಮೌಲ್ಯಕ್ಕೆ ಏರಿದ್ದವು. ಅದು ಮಸ್ಕ್ ಅವರನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯನ್ನಾಗಿರಿಸಿ ಟ್ರಿಲಿಯನೇರ್ ಕ್ಲಬ್ಗೆ ಪ್ರವೇಶಿಸುವಂತೆ ಮಾಡಿತು.
ನಂತರ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಕಂಡ ತಲ್ಲಣಗಳು ಸಂಸ್ಥೆಯ ವಿಶಾಲವಾದ ತಂತ್ರಜ್ಞಾನ-ಮಾರುಕಟ್ಟೆ ಮಾರಾಟ ಮತ್ತು ಕಂಪನಿಯ ಭವಿಷ್ಯದ ಖರ್ಚು ಯೋಜನೆಗಳ ಬಗ್ಗೆ ಕಳವಳಕ್ಕೆ ಕಾರಣವಾದವು. ಪ್ರತಿರೂಪವಾಗಿ ಕಂಪೆನಿ ಷೇರುಗಳು ತೀವ್ರ ಮಾರಾಟ ಒತ್ತಡಕ್ಕೆ ಸಿಲುಕಿ ಭಾರೀ ಕುಸಿತ ಕಂಡವು.
ಬ್ಲೂಮ್ಬರ್ಗ್ ಸದ್ಯ ಮಸ್ಕ್ ಅವರ ಸಂಪತ್ತನ್ನು 957 ಬಿಲಿಯನ್ ಎಂದು ಅಂದಾಜಿಸಿದೆ. ಅದರೆ ಫೋರ್ಬ್ಸ್ ಮಾತ್ರ ಮಸ್ಕ್ ಅವರ ಸಂಪತ್ತನ್ನು ಸುಮಾರು 1.1 ಟ್ರಿಲಿಯನ್ನಷ್ಟಿದೆ ಎಂದು ಗುರುತಿಸಿದೆ.ಅದು ತನ್ನ ಶ್ರೇಯಾಂಕದಲ್ಲಿ ಮಸ್ಕ್ ಅವರನ್ನು ಈಗ ಕೂಡಾ ಜಗತ್ತಿನ ಏಕೈಕ ಟ್ರಿಲಿಯನ್ನೇರ್ ಎಂದು ಹೇಳಿದೆ.
ಸ್ಪೇಸ್ಎಕ್ಸ್ ಮಸ್ಕ್ ಅವರ ಸಂಪತ್ತಿನ ಅತೀ ದೊಡ್ಡ ಭಾಗ. ಬ್ಲೂಮ್ಬರ್ಗ್ ಪ್ರಕಾರ ಮಸ್ಕ್ ಅವರು ಕಂಪನಿಯಲ್ಲಿ ಸುಮಾರು 744 ಬಿಲಿಯನ್ ಮೌಲ್ಯದ ಪಾಲು ಹೊಂದಿದ್ದಾರೆ.ಅದು ಅವರ ಒಟ್ಟಾರೆ ಸಂಪತ್ತಿನ ಶೇ.80ರಷ್ಟಿದೆ.
ಸ್ಪೀಸ್ ಎಕ್ಸ್ ಷೇರುಗಳು ಮಾರಾಟ ಒತ್ತಡಕ್ಕೆ ಸಿಲುಕಿದ ಸಂದರ್ಭದಲ್ಲಿ ಅವರ ಮತ್ತೊಂದು ಕಂಪೆನಿ ಟೆಸ್ಲಾದ ಷೇರುಗಳು ಸಹ ಒತ್ತಡಕ್ಕೆ ಒಳಗಾಗಿದ್ದವು.
ಯುಎಸ್ ಸರಕಾರ ಟೆಸ್ಲಾ ವಾಹನಗಳಲ್ಲಿ ಮಾರಕ ಅಪಘಾತದ ಬಗ್ಗೆ ಸುರಕ್ಷತಾ ತನಿಖೆಯನ್ನು ಪ್ರಾರಂಭಿಸಿದ ನಂತರ ಈ ಸಂಸ್ಥೆಯ ಷೇರುಗಳು ಇಳಿಕೆ ಕಾಣಲಾರಂಭಿಸಿದವು. ಅವು ಇದುವರೆಗೆ ಶೇ. 5 ಕುಸಿತಕ್ಕೊಳಗಾಗಿದೆ.
ಇದೆಲ್ಲವೂ ಎಲನ್ ಮಸ್ಕ್ ಅವರ ಒಟ್ಟಾರೆ ಸಂಪತ್ತಿನ ಕುಸಿತಕ್ಕೆ ಕಾರಣವಾದವು.
News @ your fingertips
More Stories
ವೆನಿಜುವಲಾ ಭಾರಿ ಭೂಕಂಪ; ಸಾವು – ನೋವು
ಮಾಹೆಗೆ ಜಾಗತಿಕ ಮನ್ನಣೆ, ಗುಣಮಟ್ಟದ ಶಿಕ್ಷಣಕ್ಕೆ ಮೆಚ್ಚುಗೆ
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್