7 rupees

News @ your fingertips

ಫೆಡ್ ಬ್ಯಾಂಕ್ ನೀತಿ ಕುರಿತು ಕುತೂಹಲ

ಭಾರತೀಯ ರೂಪಾಯಿ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪುತ್ತಿದ್ದಂತೆ, ಡಿಸೆಂಬರ್ 10 ಬುಧವಾರದಂದು ನಡೆಯಲಿರುವ ಯುಎಸ್ ಫೆಡರಲ್ ರಿಸರ್ವ್‌ನ ನೀತಿ- ನಿರ್ಧಾರಗಳ ಬಗ್ಗೆ ಎಲ್ಲನ ನೋಟ ನೆಟ್ಟಿದೆ.
ಅಮರಿಕದ ಫೆಡರಲ್ ರಿಸರ್ವ್‌ನ ಅಧ್ಯಕ್ಷ ಜೆರೋಮ್ ಪೊವೆಲ್ ಅವರ ನೇತೃತ್ವದ ಸಭೆಯಲ್ಲಿ ಬಡ್ಡಿ ದರ 25 ಬೇಸಿಸ್ ಪಾಯಿಂಟ್ ಕಡಿತ ನಿರೀಕ್ಷಿಸಲಾಗಿದೆ. ಇದು ಯುಎಸ್ ಡಾಲರ್‌ನ್ನು ದುರ್ಬಲಗೊಳಿಸಬಲ್ಲದು , ಜೊತೆಯಲ್ಲಿ ಮತ್ತು ಭಾರತೀಯ ಕರೆನ್ಸಿಗೆ ಬೆಂಬಲವನ್ನು ನೀಡಬಹುದು ಎನ್ನುವುದು ಮಾರುಕಟ್ಟೆಯ ನಿರೀಕ್ಷೆ.
ಮಂಗಳವಾರ ಯುಎಸ್ ಡಾಲರ್ ವಿರುದ್ಧ ರೂಪಾಯಿ 17 ಪೈಸೆ ಏರಿಕೆಯಾಗಿ 89.88 ಕ್ಕೆ ತಲುಪಿತು. ಡಿಸೆಂಬರ್ 4 ರಂದು ದೇಶೀಯ ಕರೆನ್ಸಿ ಪ್ರತಿ ಡಾಲರ್‌ಗೆ 90.46 ರ ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಮುಖ್ಯವಾಗಿ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ನಿರಂತರ ಅನಿಶ್ಚಿತತೆಗಳು ಮತ್ತು ನಿರಂತರ ವಿದೇಶಿ ಬಂಡವಾಳ ಹೊರಹರಿವು ಇದಕ್ಕೆ ಮುಖ್ಯ ಕಾರಣವಾಗಿದ್ದವು.
ಇದರ ಮಧ್ಯೆ ಭಾರತ ಮತ್ತು ಯುಎಸ್ ಡಿಸೆಂಬರ್ 10 ರಿಂದ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತದ ಕುರಿತು ಮೂರು ದಿನಗಳ ಮಾತುಕತೆಗಳನ್ನು ಪ್ರಾರಂಭಿಸಲಿವೆ.