7 rupees

News @ your fingertips

ಮಾಹೆಗೆ ಜಾಗತಿಕ ಮನ್ನಣೆ, ಗುಣಮಟ್ಟದ ಶಿಕ್ಷಣಕ್ಕೆ ಮೆಚ್ಚುಗೆ

ಮಣಿಪಾಲ್ ಅಕಾಡೆಮಿ ಆ್ ಹೈಯರ್ ಎಜುಕೇಶನ್ (ಮಾಹೆ), ಪರಿಗಣಿತ ವಿಶ್ವವಿದ್ಯಾಲಯ
ಮಾನ್ಯವಾಗಿರುವ ಈ ಉನ್ನತ ಸಂಸ್ಥೆ. ಅದು ಪ್ರತಿಷ್ಠಿತ ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ರ‌್ಯಾಂಕಿಂಗ್ಸ್
2026 ರಲ್ಲಿ ತನ್ನ ಜಾಗತಿಕ ಸ್ಥಾನವನ್ನು ಮತ್ತಷ್ಟು ವೃದ್ಥಿಸಿಕೊಂಡಿದೆ.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಮಾಹೆ, ಒಟ್ಟಾರೆ ಜಾಗತಿಕ ರ‌್ಯಾಂಕಿಂಗ್‌ನಲ್ಲಿ 101-200 ರ ಬ್ಯಾಂಡ್ ಕಾಯ್ದುಕೊಂಡಿದೆ. ಲಿಂಗ ಸಮಾನತೆ ವಿಭಾಗದಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿ ಸಂಶೋಧನೆ, ಬೋಧನೆ, ಜನಸಂಪರ್ಕ ಮತ್ತು ಸಾಂಸ್ಥಿಕ ಮೇಲ್ವಿಚಾರಣೆಯಲ್ಲಿ ಅತ್ಯುನ್ನತ ಸಾಧನೆ ಮಾಡಲು ಮಾಹೆ ಹೊಂದಿರುವ ಬದ್ಧತೆಯನ್ನು ಈ ಇತ್ತೀಚಿನ ರ‌್ಯಾಂಕಿಂಗ್‌ನಲ್ಲಿ ಗುರುತಿಸಲಾಗಿದೆ.
ಮಾಹೆ ಸಂಸ್ಥೆಯು ಎಸ್‌ಡಿಜಿ 5 ( ಲಿಂಗ ಸಮಾನತೆ) ಗಾಗಿ ಜಾಗತಿಕವಾಗಿ ನಂ. 1 ರ‌್ಯಾಂಕ್ ಪಡೆದುಕೊಂಡಿದೆ. ಕಳೆದ ಆವೃತ್ತಿಯಲ್ಲಿ 11ನೇ ಸ್ಥಾನದಲ್ಲಿದ್ದ ಮಾಹೆ, ಈ ಬಾರಿ ಅಭೂತಪೂರ್ವ ಮುನ್ನಡೆ ಸಾಸಿದೆ.. ಹಾಗೆಯೇ,
ಎಸ್‌ಡಿಜಿ 3 ( ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ) ರಲ್ಲಿ ಜಾಗತಿಕವಾಗಿ 5 ನೇ ರ‌್ಯಾಂಕ್
ದಾಖಲಿಸಿದೆ. ಇದು 2025 ರಲ್ಲಿದ್ದ 74ನೇ ರ‌್ಯಾಂಕ್‌ಗೆ ಹೋಲಿಸಿದರೆ ಭಾರಿ ಪ್ರಗತಿಯಾಗಿದೆ.
ಇತರ ಪ್ರಮುಖ ಕ್ಷೇತ್ರಗಳಲ್ಲೂ ಮಾಹೆ ತನ್ನ ಉನ್ನತ ಪ್ರಗತಿಯನ್ನು ಮುಂದುವರಿಸಿದ್ದು, ಎಸ್‌ಡಿಜಿ 4 (ಗುಣಮಟ್ಟದ ಶಿಕ್ಷಣ) ರಲ್ಲಿ 43ನೇ ಸ್ಥಾನದಿಂದ 23ನೇ ರ‌್ಯಾಂಕ್‌ಗೆ ಏರಿದೆ. ಇನ್ನು ಎಸ್‌ಡಿಜಿ 17 (ಗುರಿಗಳಿಗಾಗಿ ಪಾಲುದಾರಿಕೆ)ರಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಈ ಹಿಂದೆ 601-800 ಬ್ಯಾಂಡ್‌ನಲ್ಲಿದ್ದ ಸಂಸ್ಥೆ ಈಗ ಜಾಗತಿಕವಾಗಿ 93ನೇ ರ‌್ಯಾಂಕ್‌ಗೆ ತಲುಪಿದೆ.
ಈ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮಾಹೆಯ ಉಪಕುಲಪತಿಗಳಾದ ಡಾ. ಶರತ್ ಕೆ. ರಾವ್ ಅವರು, ಇಂಪ್ಯಾಕ್ಟ್ ರ‌್ಯಾಂಕಿಂಗ್ಸ್ 2026 ರಲ್ಲಿ ಮಾಹೆಯ ಸಾಧನೆಯು ಶಿಕ್ಷಣ, ಸಂಶೋಧನೆ, ಆರೋಗ್ಯ ರಕ್ಷಣೆ ಮತ್ತು ಸಮುದಾಯದ ಒಳಗೊಳ್ಳುವಿಕೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನಮಗಿರುವ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಲಿಂಗ ಸಮಾನತೆಯಲ್ಲಿ ಜಾಗತಿಕವಾಗಿ ನಂ. 1 ರ‌್ಯಾಂಕ್ ಪಡೆದಿರುವುದು ಮತ್ತು ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಅಗ್ರ ಐದು ಸ್ಥಾನಗಳಲ್ಲಿ
ಗುರುತಿಸಿಕೊಂಡಿರುವುದು ನಮ್ಮ ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು, ಆರೋಗ್ಯ ವೃತ್ತಿಪರರು ಮತ್ತು ಪಾಲುದಾರರ ಸಾಮೂಹಿಕ ಪ್ರಯತ್ನದ ಫಲವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.
ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)
ಮಾಹೆ ಇನ್‌ಸ್ಟಿಟ್ಯೂಷನ್ ಆ್ ಎಮಿನೆನ್ಸ್ ಮಾನ್ಯತೆ ಪಡೆದ ಡೀಮ್ಡ್ ವಿಶ್ವವಿದ್ಯಾಲಯ. ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್‌ಶೆಡ್‌ಪುರ ಮತ್ತು ದುಬೈ ಕ್ಯಾಂಪಸ್‌ಗಳ ಸಂಯೋಜಿತ ಘಟಕಗಳ ಮೂಲಕ ಹೆಲ್ತ್ ಸೈನ್ಸಸ್ ), ಮ್ಯಾನೇಜ್‌ಮೆಂಟ್, ಲಾ, ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸಸ್ , ಹಾಗೂ ಟೆಕ್ನಾಲಜಿ ಮತ್ತು ಸೈನ್ಸ್ ವಿಭಾಗಗಳಲ್ಲಿ 400 ಕ್ಕೂ ಹೆಚ್ಚು ವಿಶೇಷ ಕೋರ್ಸ್‌ಗಳನ್ನು ಒದಗಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಇತಿಹಾಸ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಂಶೋಧನೆಗೆ ನೀಡಿರುವ ಗಣನೀಯ ಕೊಡುಗೆಯೊಂದಿಗೆ ಮಾಹೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಹಾಗೂ ಪ್ರಶಂಸೆಯನ್ನು ಗಳಿಸಿದೆ.