7 rupees

News @ your fingertips

ಏರ್ ಇಂಡಿಯಾಕ್ಕೆ ಹೊಸ ಸಾರಥಿ ಗೆಬ್ರೆಮರಿಯಮ್

ಏರ್‌ಇಂಡಿಯಾದ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ತೆವೋಲ್ಡೆ ಗೆಬ್ರೆಮರಿಯಮ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಅತ್ಯಂತ ಕಠಿಣ ಹಾಗೂ ಜವಾಬ್ದಾರಿಯುತ ಪರಿಸ್ಥಿತಿಯಲ್ಲಿ ತೆವೋಲ್ಡೆ ಗೆಬ್ರೆಮರಿಯಮ್ ಹೊಸ ಹೊಣೆಗಾರಿಕೆ ಹೊತ್ತಿದ್ದಾರೆ.
ಏರ್‌ಇಂಡಿಯಾದ ನಷ್ಟವು ದುಪ್ಪಟ್ಟಾಗಿದ್ದು , ಕಾರ್ಯಾಚರಣೆಗೆ ಹೆಚ್ಚಿನ ನಗದಿನ ಅಗತ್ಯತೆಯಿದ್ದು , ಷೇರುದಾರರು ಮತ್ತಷ್ಟು ಬಂಡವಾಳ ಹೂಡಬೇಕಾದ ಸವಾಲಿನ ಸಮಯವಿದಾಗಿದೆ. ಜೊತೆಯಲ್ಲಿ ಈ ಹಿಂದೆ ಸರ್ಕಾರಿ ಸ್ವಾಮ್ಯದಲ್ಲಿದ್ದ ಈ ವಿಮಾನಯಾನ ಸಂಸ್ಥೆಯ ರೂಪಾಂತರವನ್ನು ವೇಗಗೊಳಿಸುವುದು ಅವರ ಮುಖ್ಯ ಕಾರ್ಯ ಗುರಿಯಾಗಿದೆ. ಕ್ಯಾಂಪ್‌ಬೆಲ್ ವಿಲ್ಸನ್ ಅವರ ನಂತರ ಅಧಿಕಾರಕ್ಕೆ ಬಂದ ಗೆಬ್ರೆಮರಿಯಮ್ ಅವರು, ಈ ಹಿಂದೆ ಒಂದು ದಶಕಕ್ಕೂ ಹೆಚ್ಚು ಕಾಲ ಇಥಿಯೋಪಿಯನ್ ಏರ್‌ಲೈನ್ಸ್ ಗ್ರೂಪ್‌ನ ನೇತೃತ್ವ ವಹಿಸಿದ್ದರು. ಆ ಆಫ್ರಿಕನ್ ವಿಮಾನಯಾನ ಸಂಸ್ಥೆಯ ವಿಮಾನಗಳ ಸಂಖ್ಯೆ, ನೆಟ್‌ವರ್ಕ್ ಮತ್ತು ವಿಮಾನಯಾನ ಸೇವೆಗಳ ಬೃಹತ್ ವಿಸ್ತರಣೆಯನ್ನು ಯಶಸ್ವಿಯಾಗಿ ಅವರು ಮುನ್ನಡೆಸಿದ್ದರು.
ನೂತನ ಸಿಇಒ ಅವರ ಮುಂದಿರುವ ಸವಾಲುಗಳು
ಸುರಕ್ಷತೆಗೆ ಮೊದಲ ಆದ್ಯತೆ: ತೀವ್ರ ಕಾರ್ಯಾಚರಣೆಯ ಸವಾಲುಗಳು ಮತ್ತು ಅಪಘಾತಗಳ ನಂತರ ಸಾರ್ವಜನಿಕ ನಂಬಿಕೆಯನ್ನು ಮರುಸ್ಥಾಪಿಸಲು ಸಂಸ್ಥೆಯಲ್ಲಿ ಕಟ್ಟುನಿಟ್ಟಾದ ಸುರಕ್ಷತಾ ಸಂಸ್ಕೃತಿಯನ್ನು ಜಾರಿಗೆ ತರುವುದು.
ನಿರ್ವಹಣೆ ಸುಧಾರಣೆ: ಹೊಸ ವಿಮಾನಗಳ ಸೇರ್ಪಡೆಯೊಂದಿಗೆ, ತಾಂತ್ರಿಕ ಅನುಭವವನ್ನು ಬಳಸಿ ವಿಮಾನಗಳ ದುರಸ್ತಿ, ಎಂಜಿನಿಯರಿಂಗ್ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವುದು.
ಹಣಕಾಸಿನ ಶಿಸ್ತು: ಹೆಚ್ಚುತ್ತಿರುವ ನಗದು ವೆಚ್ಚವನ್ನು ನಿಯಂತ್ರಿಸುವುದು ಮತ್ತು ಕಾರ್ಯಾಚರಣೆಯ ನಷ್ಟವನ್ನು ಕಡಿಮೆ ಮಾಡಿ ಟಾಟಾ ಸನ್ಸ್ ಹಾಗೂ ಸಿಂಗಾಪುರ್ ಏರ್‌ಲೈನ್ಸ್‌ನ ಮೇಲಿನ ಬಂಡವಾಳದ ಅವಲಂಬನೆಯನ್ನು ತಗ್ಗಿಸುವುದು.
ಆಡಳಿತ ಮತ್ತು ನಾಯಕತ್ವದ ಮರುರಚನೆ: ನಿರ್ವಹಣಾ ರಚನೆಯನ್ನು ಬದಲಾಯಿಸುವುದು, ಜವಾಬ್ದಾರಿಯನ್ನು ಹೆಚ್ಚಿಸುವುದು ಮತ್ತು ದಕ್ಷ ನಾಯಕರನ್ನು ನೇಮಿಸುವುದು.
ದೈನಂದಿನ ಕಾರ್ಯಾಚರಣೆಯ ಸುಧಾರಣೆ: ಸಮಯಕ್ಕೆ ಸರಿಯಾಗಿ ವಿಮಾನಗಳ ಹಾರಾಟ , ಲಗೇಜ್ ನಿರ್ವಹಣೆ ಮತ್ತು ಪ್ರಯಾಣಿಕರ ಸೇವೆಯನ್ನು ಸುಧಾರಿಸುವುದು