ಅಯೋಧ್ಯ ರಾಮಮಂದಿರ ದೇಣಿಗೆ ಕಳ್ಳತನ ಆರೋಪದ ತನಿಖೆ ನಡೆಯುತ್ತಿರುವ ಹೊತ್ತಲ್ಲೇ ರಾಮ ಮಂದಿರ ಟ್ರಸ್ಟ್ನ ಮುಖ್ಯಸ್ಥ ಚಂತ್ ರಾಯ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ದೇಣಿಗೆ ಕಳ್ಳತನ ಆರೋಪದ ತನಿಖೆ ನಡೆಯುತ್ತಿರುವ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ಚಂಪತ್ ರಾಯ್ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಹೊತ್ತಿನಲ್ಲಿ ಟ್ರಸ್ಟ್ನ ಇನ್ನೊರ್ವ ಟ್ರಸ್ಟಿ ಅನಿಲ್ ಮಿಶ್ರಾ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ಈ ಪ್ರಕರಣದಲ್ಲಿ ಎಂಟು ಜನರನ್ನು ಬಂಧಿಸಿದ ಒಂದು ದಿನದ ನಂತರ ರಾಯ್ ಮತ್ತು ಮಿಶ್ರಾ ರಾಜೀನಾಮೆ ನೀಡಿದ್ದಾರೆ. ರಾಯ್ ಅವರ ಚಾಲಕ ಮತ್ತು ಆಪ್ತ ಸಹಚರ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಬಂಧಿತರಲ್ಲಿ ಒಬ್ಬರು.
ಈ ತಿಂಗಳ ಆರಂಭದಲ್ಲಿ ಆರೋಪಗಳನ್ನು ಪರಿಶೀಲಿಸಲು ರಚಿಸಲಾದ ಎಸ್ಐಟಿ ಗುರುವಾರ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದೆ.
ದೇಣಿಗೆಯ ದುರುಪಯೋಗದ ಆರೋಪದ ಮೇಲೆ ಎಫ್ಐಆರ್ನಲ್ಲಿ ಹೆಸರಿಸಲಾದ ಎಂಟು ಜನರನ್ನು ಬಂಧಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯ ಕೃಷ್ಣ ಮೋಹನ್ ಅವರ ದೂರಿನ ಮೇರೆಗೆ, ಉತ್ತರ ಪ್ರದೇಶ ಸರ್ಕಾರವು ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿತ್ತು. ಅದರ ಪ್ರಾಥಮಿಕ ವರದಿಯ ಶಿಫಾರಸುಗಳನ್ನು ಅನುಸರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ , ಅಯೋಧ್ಯೆ ರಾಮ ಮಂದಿರದ ದೇಣಿಗೆಯ ದುರುಪಯೋಗದ ಆರೋಪ ಹೊತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಎಸ್ಐಟಿ ತನ್ನ ವರದಿಯನ್ನು ಸಲ್ಲಿಸಿದ ಕೂಡಲೇ ಅದರಲ್ಲಿ ತಪ್ಪಿತಸ್ಥರೆಂದು ಕಂಡುಬಂದವರ ಮೇಲೆ ಕ್ರಮ ಜರಗಿಸಲಾಗುವುದು.ಅಯೋಧ್ಯೆ ನಮ್ಮೆಲ್ಲರ ನಂಬಿಕೆ ಮತ್ತು ಸನಾತನ ಧರ್ಮದ ಸಂಕೇತವಾಗಿದೆ. ಅಯೋಧ್ಯೆಯ ಮೇಲೆ ಕೆಟ್ಟ ಕಣ್ಣು ಹಾಕಬೇಡಿ. ಭಗವಾನ್ ರಾಮನ ಘನತೆಯನ್ನು ಎತ್ತಿಹಿಡಿಯಲು ಕಲಿಯಿರಿ ಎಂದು ಅದಿತ್ಯನಾಥ್ ಮನವಿ ಮಾಡಿದ್ದರು.
ಎಸ್ಐಟಿ ರಚಿಸಲಾಗಿದೆ ಮತ್ತು ಅದರ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ನಾವು ಹೇಳಿದ್ದೆವು.ಎಸ್ಐಟಿ ವರದಿ ಬಂದಿತು ಮತ್ತು ಕ್ರಮ ತಕ್ಷಣವೇ ಪ್ರಾರಂಭವಾಯಿತು. ಈಗಾಗಲೇ ಹೇಳಿದಂತೆ, ನಾವು ಸತ್ಯವನ್ನು ಸುಳ್ಳಿನಿಂದ ಬೇರ್ಪಡಿಸುತ್ತೇವೆ ಎನ್ನುವ ಭರವಸೆ ನೀಡುತ್ತೇನೆ. ಸಾರ್ವಜನಿಕ ನಂಬಿಕೆಯನ್ನು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದರು.
News @ your fingertips
More Stories
ಕಂಪೆನಿ ನಿಧಿ ಬಳಕೆ ಇತ್ಯರ್ಥ ಅರ್ಜಿ ತಿರಸ್ಕೃತ
ವೆನಿಜುವೆಲಾ ಭೂಕಂಪ ನೆರವಿಗೆ ಧಾವಿಸಿದ ಭಾರತ
ವೆನಿಜುವಲಾ ಭಾರಿ ಭೂಕಂಪ; ಸಾವು – ನೋವು