7 rupees

News @ your fingertips

ಐಟಿಸಿ ಷೇರುಗಳು ಡಿಲಿಸ್ಟ್ ?

ಭಾರತದ ಪ್ರಮುಖ ಕಂಪೆನಿಗಳಲ್ಲೊಂದಾದ ಐಟಿಸಿ ತನ್ನ ಷೇರುಗಳನ್ನು ದೇಶದ ಅತ್ಯಂತ ಹಳೆಯ ಷೇರು ವಿನಿಮಯ ಕೇಂದ್ರದಿಂದ ಡಿಲಿಸ್ಟ್ ಮಾಡುವ ನಿರ್ಧಾರಕ್ಕೆ ಬಂದಿದೆಯೇ ?
ಯಾಕಾಗಿ ಐಟಿಸಿ ಈ ನಿರ್ಧಾರಕ್ಕೆ ಬಂದಿದೆ? ಆದರ ಹಿಂದಿರುವ ಕಾರಣಗಳು ಏನು ?

ಐಟಿಸಿ ಲಿಮಿಟೆಡ್‌ನ ಆಡಳಿತ ಮಂಡಳಿ ದೇಶದ ಸುಮಾರು 117 ವರ್ಷಗಳ ಇತಿಹಾಸವುಳ್ಳ ಷೇರು ವಿನಿಮಯ ಕೇಂದ್ರದಿಂದ ತನ್ನ ಷೇರುಗಳನ್ನು ಹಿಂಪಡೆಯಲು ಮುಂದಾಗಿದೆ.
ಅಕ್ಟೋಬರ್ 30 ರಂದು ವಿನಿಮಯ ಕೇಂದ್ರಕ್ಕೆ ಸಲ್ಲಿಸಲಾದ ವರದಿ ಪ್ರಕಾರ ,ಕೊಲಕ್ಕತ್ತಾ ಷೇರು ವಿನಿಮಯ ಕೇಂದ್ರದಿಂದ ಸಾಮಾನ್ಯ ಷೇರುಗಳನ್ನು ಸ್ವಯಂಪ್ರೇರಿತವಾಗಿ ಹಿಂತೆಗೆದುಕೊಳ್ಳಲು ಐಟಿಸಿ ನಿರ್ಧರಿಸಿದೆ.
ಅದರೆ ಐಟಿಸಿ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್( ಬಿಎಸ್‌ಇ ) ಮತ್ತು ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಚ್ (ಎನ್‌ಎಸ್‌ಇ)ನಲ್ಲಿ ತನ್ನ ವಹಿವಾಟು ಮುಂದುವರಿಸಲಿವೆ.
ಇನ್ನೂ ಮುಂದೆ ಐಟಿಸಿ ಷೇರುಗಳು ಕೊಲಕ್ಕತ್ತಾ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮಾತ್ರ ವಹಿವಾಟು ನಡೆಸುವುದಿಲ್ಲ.
ಸೆಬಿಯ (ಈಕ್ವಿಟಿ ಷೇರುಗಳ ಹಿಂತೆಗೆದುಕೊಳ್ಳುವಿಕೆ) 2021 ರ ನಿಯಮಗಳ 5 ಮತ್ತು 6 ರ ಪ್ರಕಾರ, ಯಾವುದೇ ಕಂಪನಿ ತನ್ನ ಸಾಮಾನ್ಯ ಷೇರುಗಳನ್ನು ಸಿಎಸ್‌ಇಯಿಂದ ಸ್ವಯಂಪ್ರೇರಿತವಾಗಿ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.
ಕಂಪೆನಿಯ ಸಾಮಾನ್ಯ ಷೇರುಗಳು ಎನ್‌ಎಸ್‌ಸಿ ಹಾಗೂ ಬಿಎಸ್‌ಇ ನಲ್ಲಿ ಲಿಸ್ಟ್ ಆಗಿರುವ ಕಾರಣ ರಾಷ್ಟ್ರವ್ಯಾಪಿ ವಹಿವಾಟಿಗೆ ಅವಕಾಶ ಮುಂದುವರಿಯಲಿದೆ ಎಂದು ಐಟಿಸಿ ತನ್ನ ಫೈಲಿಂಗ್‌ನಲ್ಲಿ ತಿಳಿಸಿದೆ.
ಕೊಲಕ್ಕತ್ತಾ ಸ್ಟಾಕ್ ಎಕ್ಸ್‌ಚೇಂಜ್ ದೇಶದ ಅತ್ಯಂತ ಹಳೆಯ ಷೇರು ವಿನಿಮಯ ಕೇಂದ್ರಗಳಲ್ಲಿ ಒಂದಾಗಿದೆ.
1908ರಲ್ಲಿ ಆರಂಭಗೊಂಡ ಈ ಕೇಂದ್ರ 117 ವರ್ಷಗಳಷ್ಟು ಇತಿಹಾಸ ಹೊಂದಿದೆ. ಸಂಸ್ಥೆ ಒಂದು ಕಾಲದಲ್ಲಿ ವಹಿವಾಟಿನಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ್ನು ಮೀರಿಸಿತ್ತು. ಆದರೆ ಮುಂದಿನ ದಿನಗಳಲ್ಲಿ ವಹಿವಾಟಗಳಲ್ಲಿ ನೀತಿ ನಿಯಮಗಳನ್ನು ಪಾಲಿಸದ ಕಾರಣ ಏಪ್ರಿಲ್ 2013 ರಲ್ಲಿ ಸೆಬಿ ಅದರ ಕಾರ್ಯಚರಣೆಗೆ ನಿರ್ಬಂಧಗಳನ್ನು ಹೇರಿತ್ತು. ಕಾರ್ಯಾಚರಣೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ನ್ಯಾಯಾಲಯಗಳಲ್ಲಿ ಸೆಬಿ ನಿರ್ದೇಶನಗಳನ್ನು ಪ್ರಶ್ನಿಸಿ ಹಲವು ವರ್ಷಗಳ ಪ್ರಯತ್ನಗಳ ನಂತರ ಈಗ ಕೊಲಕ್ಕತ್ತಾ ಎಕ್ಸ್‌ಚೇಂಜ್ ತನ್ನ ಚಟುವಟಿಕೆಗಳನ್ನು ನಿಲ್ಲಿಸಿ , ವ್ಯವಹಾರದಿಂದ ಹಿಂದೆ ಸರಿಯಲು ಮತ್ತು ಷೇರು ವಿನಿಮಯ ಪರವಾನಿಗೆಯಿಂದ ಸ್ವಯಂಪ್ರೇರಿತವಾಗಿ ನಿರ್ಗಮಿಸಲು ನಿರ್ಧರಿಸಿದೆ. ಇದೇ ಕಾರಣಕ್ಕೂ ಐಟಿಸಿ ತನ್ನ ವಹಿವಾಟನ್ನು ಅಲ್ಲಿ ನಿಲ್ಲಿಸಲು ಮುಂದಾಗಿದೆ.
ಆದರೆ ಎನ್‌ಎಸ್‌ಸಿ ಹಾಗೂ ಬಿಎಸ್‌ಸಿನಲ್ಲಿ ವಹಿವಾಟು ಮುಂದುವರಿಯುವ ಕಾರಣ ಷೇರು ಬೆಲೆಯಲ್ಲಿ ಯಾವುದು ವ್ಯತ್ಯಯವಾಗಲಾರದು.