News @ your fingertips
News @ your fingertips
ಹಬ್ಬಗಳ ಸಮಯ ಹತ್ತಿರ ಬರುತ್ತಿದ್ದಂತೆ ಜಿಎಸ್‌ಟಿ ಕೌನ್ಸಿಲ್ ಸೆಪ್ಟೆಂಬರ್‌ನಲ್ಲಿ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಿ ಜನಸಾಮಾನ್ಯರಿಗೆ ದೊಡ್ಡ ಕೊಡುಗೆಯನ್ನು ಪ್ರಕಟಿಸಿತ್ತು. ಈ ತೆರಿಗೆ ಕಡಿತ ಲಾಭ ನೇರವಾಗಿ ಗ್ರಾಹಕರಿಗೆ ವರ್ಗಾವಣೆಯ ಲಾಭವೂ ಲಭಿಸಿತ್ತು. ತೆರಿಗೆ ಕಡಿತವಾದರೂ , ಅಕ್ಟೋಬರ್ ಅಂತ್ಯಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ.4.6 ರಷ್ಟು ಏರಿಕೆ ಕಂಡು, 1.96 ಟ್ರಿಲಿಯನ್‌ಗಳಿಗೆ ತಲುಪಿದೆ.
2025 ಅಕ್ಟೋಬರ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 1.96 ಟ್ರಿಲಿಯನ್‌ಗೆ ಏರಿದೆ ಎಂದು ಸರಕಾರದ ಅಂಕಿ- ಅಂಶಗಳು ಹೇಳಿವೆ. ಹಿಂದಿನ ಸಾಲಿನಲ್ಲಿ ಇದು 1.87 ಟ್ರಿಲಿಯನ್ ಆಗಿತ್ತು.
ಸಾಲಾಗಿ ಬಂದ ಹಬ್ಬಗಳ ಪ್ರಯುಕ್ತ ಅಕ್ಟೋಬರ್‌ನಲ್ಲಿ ಖರೀದಿ ಪ್ರಮಾಣ ಹೆಚ್ಚಾಗಿತ್ತು. ಜೊತೆಯಲ್ಲಿ ಜಿಎಸ್‌ಟಿ ಕಡಿತವೂ ನೇರವಾಗಿ ಗ್ರಾಹಕರಿಗೆ ವರ್ಗಾಯಿಸಿದ್ದು , ಮಾರಾಟದಲ್ಲಿ ಏರಿಕೆ ಕಾಣಲು ನೆರವಾಗಿದೆ. ಇದರ ಪರಿಣಾಮ ಜಿಎಸ್‌ಟಿ ಸಂಗ್ರಹ ಅಧಿಕವಾಗಿದೆ ಎನ್ನುವುದು ವಾದ.
ಹಬ್ಬದ ಋತುವಿನ ಬೇಡಿಕೆ ಮತ್ತು ಕಡಿಮೆ ತೆರಿಗೆ ದರಗಳಿಂದಾಗಿ ಉತ್ಪನ್ನಗಳ ಬೆಲೆಗಳು ಕಡಿಮೆಯಾಗಿರುವ ಕಾರಣಕ್ಕೆ ಮಾರಾಟ ಪ್ರಮಾಣ ವೃದ್ಧಿಸಿದೆ. ನವೆಂಬರ್‌ನಲ್ಲೂ ಇದೇ ಪ್ರವೃತ್ತಿ ಮುಂದುವರಿದು , ಜಿಎಸ್‌ಟಿ ಸಂಗ್ರಹ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಸೆಪ್ಟೆಂಬರ್ 22 ರಂದು ಜಿಎಸ್‌ಟಿ ಕೌನ್ಸಿಲ್ ಹೊಸ ’ಎರಡು ಹಂತದ’ ಸರಕು ಮತ್ತು ಸೇವಾ ತೆರಿಗೆ ರಚನೆಯನ್ನು ಜಾರಿಗೆ ತಂದಿತು. ಭಾರತದಲ್ಲಿ ಮಾರಾಟವಾಗುವ ಸರಕುಗಳಿಗೆ ಹಿಂದಿನ ಬಹು-ಹಂತದ ತೆರಿಗೆ ಬದಲಾಗಿ ಈಗ ಶೇ. 5 ಮತ್ತು ಶೇ .18 ರ ಹೊಸ ತೆರಿಗೆ ದರಗಳನ್ನು ಹೊಂದಲಾಗಿದೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?