News @ your fingertips
News @ your fingertips
ಅಮೆರಿಕ ವಿಧಿಸಿದ ಶೇ. 50 ಸುಂಕ ಸುಮಾರು 50 ಶತಕೋಟಿ ಡಾಲರ್ ಮೌಲ್ಯದ ಭಾರತೀಯ ಸರಕುಗಳ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.
ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಸುಮಾರು 48.2 ಶತಕೋಟಿ ಡಾಲರ್ನಷ್ಟು (2024 ರ ವ್ಯಾಪಾರ ಮೌಲ್ಯವನ್ನು ಆಧರಿಸಿ) ಸರಕುಗಳು ಹೆಚ್ಚುವರಿ ಸುಂಕಗಳಿಗೆ ಒಳಪಟ್ಟಿರುತ್ತವೆ ಎಂದು ಅಂದಾಜಿಸಲಾಗಿದೆ ಎಂದು ಕೇಂದ್ರ ಸರಕಾರ ವಿವರಿಸಿದೆ.
ಡೊನಾಲ್ಡ್ ಟ್ರಂಪ್ ಅವರ ಸುಂಕದ ಪರಿಣಾಮದ ಕುರಿತಾದ ಪ್ರಶ್ನೆಗೆ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ್ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.
ಟ್ರಂಪ್ ಭಾರತದ ಮೇಲೆ ಶೇ. 25 ಪರಸ್ಪರ ಸುಂಕ ಮತ್ತು ರಷ್ಯಾದ ತೈಲ ಖರೀದಿಯ ಮೇಲೆ ಹೆಚ್ಚುವರಿ ಶೇ. 25 ಸುಂಕವನ್ನು ವಿಧಿಸಿದ್ದಾರೆ, ಇದರ ಪರಿಣಾಮವಾಗಿ ಒಟ್ಟು ಶೇ.50 ಸುಂಕಗಳು ಪಾವತಿಸಬೇಕಿದೆ. ಆಗಸ್ಟ್ 7 ರಿಂದ ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಕೆಲವು ಸರಕುಗಳ ಮೇಲೆ ಶೇ. 25 ರಷ್ಟು ಪರಸ್ಪರ ಸುಂಕ ವಿಧಿಸಲಾಗಿದೆ. ಇದಲ್ಲದೆ, ಆಗಸ್ಟ್ 27ರಿಂದ ಜಾರಿಗೆ ಬರುವಂತೆ ಶೇ. 25 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಲಾಗಿದೆ ಎಂದು ಪ್ರಸಾದ್ ವಿವರಿಸಿದರು.
ಅಮೆರಿಕದ ಸುಂಕಗಳ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ಭದ್ರಪಡಿಸಲು ಮತ್ತು ರೈತರು, ಕಾರ್ಮಿಕರು ಮತ್ತು ಇತರರನ್ನು ರಕ್ಷಿಸಲು ಕೇಂದ್ರವು ಬದ್ಧವಾಗಿದೆ ಎಂದು ಸಚಿವರು ಉತ್ತರದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಭಾರತ ಮತ್ತು ಯುಎಸ್ಎ ಬಹು-ವಲಯ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಕುರಿತು ಮಾತುಕತೆ ನಡೆಸುತ್ತಿದ್ದು, ಈಗಾಗಲೇ ಐದು ಸುತ್ತಿನ ಮಾತುಕತೆಗಳು ಪೂರ್ಣಗೊಂಡಿವೆ. ಆಗಸ್ಟ್ 25 ರಂದು ನಿಗದಿಯಾಗಿದ್ದ ಆರನೇ ಸುತ್ತಿನ ಯುಎಸ್ ಸುಂಕ ಮಾತುಕತೆ ಮುಂದೂಡಲ್ಪಟ್ಟಿದೆ ಎಂದು ಅವರು ಹೇಳಿದ್ದಾರೆ
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?