7 rupees

News @ your fingertips

ವಾಣಿಜ್ಯ ಅನಿಲ ಪೂರೈಕೆ ಸಹಜ ಸ್ಥಿತಿಗೆ, ನಿರ್ಬಂಧ ತೆರವು

ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಅನಿಲ ಪೂರೈಕೆಯ ಮೇಲೆ ಹೇರಲಾಗಿದ್ದ ಎಲ್ಲಾ ವಲಯ ನಿರ್ಬಂಧಗಳನ್ನು ಕೇಂದ್ರ ಸರಕಾರ ತೆಗೆದುಹಾಕಿದೆ.
ಯುದ್ದ ಬಿಕ್ಕಟ್ಟಿನ ಮೊದಲಿನ ದಿನಗಳಲ್ಲಿ ಇದ್ದ ಪೂರೈಕೆ ವ್ಯವಸ್ಥೆ ಈ ಮೂಲಕ ಪುನರ್ ಆರಂಭಗೊಳ್ಳಲಿದೆ.
ಬಿಕ್ಕಟ್ಟಿನ ಆರಂಭದಲ್ಲಿ ಸ್ಥಗಿತಗೊಳಿಸಲಾಗಿದ್ದ ಬೃಹತ್ ಅನಿಲ ಪೂರೈಕೆಯನ್ನು ಯುದ್ದ ಪೂರ್ವ ಬಳಕೆಯ ಶೇ. 50 ರಷ್ಟು ಸಡಿಲಿಸಲಾಗಿದೆ. ಇದು ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ದೊಡ್ಡ ಮಟ್ಟದ ನೆರವಾಗಲಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ನಂತರ ಇತ್ತೀಚಿಗೆ ಅನಿಲ ಪೂರೈಕೆಯಲ್ಲಿ ಒಂದಿಷ್ಟು ಸುಧಾರಣೆ ಕಂಡು ಬಂದಿದೆ.
ಬಿಕ್ಕಟ್ಟಿನ ಸಂದರ್ಭದಲ್ಲಿ ಮಧ್ಯ ಪ್ರಾಚ್ಯ ರಾಷ್ಟ್ರಗಳಿಂದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸರಬರಾಜಿನಲ್ಲಿ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯಗಳಾದ ಪರಿಣಾಮ ಕೇಂದ್ರ ಸಚಿವಾಲಯವು ಅಗತ್ಯ ಸರಕುಗಳ ಕಾಯ್ದ್ದೆುಯಡಿಯಲ್ಲಿ ದೇಶದಲ್ಲಿ ಅನಿಲ ಪೂರೈಕೆ ಸಂಬಂಧ ನಿರ್ಬಂಧಗಳನ್ನು ಹಾಕಿ ಅದೀಶ ಹೊರಡಿಸಿತ್ತು.
ಅನಿಲ ಪೂರೈಕೆಯಲ್ಲಿ ವ್ಯತ್ಯಯದಿಂದ ವಾಣಿಜ್ಯ ಹಾಗೂ ಕೈಗಾರಿಕಾ ವಲಯವೂ ಭಾರಿ ಪ್ರಮಾಣದಲ್ಲಿ ಹೊಡೆತವನ್ನು ಅನುಭವಿಸಿತ್ತು. ಅನಿಲ ಬಳಕೆಯನ್ನು ಅವಲಂಬಿಸಿದ್ದ ಉದ್ಯಮಗಳು ಮುಖ್ಯವಾಗಿ ಆಹಾರೋದ್ಯಮಕ್ಕೆ ಹೆಚ್ಚಿನ ನಷ್ಟ ಉಂಟಾಗಿತ್ತು. ವಸತಿಗೃಹ , ಹೋಟೇಲ್‌ಗಳ ವ್ಯವಹಾರದಲ್ಲಿ ಸಾಕಷ್ಟು ಏರುಪೇರು ಉಂಟಾಗಿತ್ತು. ಅನಿಲ ಪೂರೈಕೆ ಇಲ್ಲದೆ ಬಹಳಷ್ಟು ಸಣ್ಣ ಹೊಟೇಲ್‌ಗಳು ಬಾಗಿಲು ಮುಚ್ಚಿದ್ದರೆ , ಹಲವು ಹೊಟೇಲ್‌ಗಳಲ್ಲಿ ತಿಂಡಿ ತಿನಿಸುಗಳು ಪ್ರಮಾಣ ಕಡಿತಗೊಂಡಿತ್ತು. ಪರಿಣಾಮ ವ್ಯವಹಾರ ಕುಸಿದಿತ್ತು.