News @ your fingertips
News @ your fingertips
ಭಾರತ ಸರಕಾರದ ‘ಮಿನಿ ರತ್ನ ’ ಎಂದು ಕರೆಯಲಾಗುವ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್ಪಿಎಲ್) ಮೂರನೇ ತ್ರೈಮಾಸಿಕ ಅವಧಿ ಅಂತ್ಯಕ್ಕೆ 1,445 ಕೋ.ರೂ .ಗಳ ಭಾರಿ ನಿವ್ವಳ ಲಾಭ ಗಳಿಸಿದೆ.
ಹಿಂದಿನ ವರ್ಷ ಇದೇ ಅವಧಿಯಲ್ಲಿನ ಲಾಭ 304 ಕೋ.ರೂ.ಗಳಾಗಿತ್ತು. ಈ ಅರ್ಥಿಕ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ 627 ಕೋ.ರೂ. ಲಾಭ ಹೊಂದಿತ್ತು .
ಹಿಂದಿನ ಸಾಧನೆಗಳಿಗೆ ಹೋಲಿಸಿದರೆ ಸಂಸ್ಥೆ ಈ ತ್ರೈಮಾಸಿಕದಲ್ಲಿ ಎರಡು ಪಟ್ಟಿಗಿಂತ ಹೆಚ್ಚಿನ ಲಾಭ ದಾಖಲಿಸಿದೆ. ಪರಿಣಾಮ ಗುರುವಾರ ಷೇರು ಮಾರುಕಟ್ಟೆಯಲ್ಲಿ ಎಂಆರ್ಪಿಎಲ್ ಷೇರುಗಳು ಶೇ.12ರಷ್ಟು ಜಿಗಿತ ಕಂಡವು. ಎಂಆರ್ಪಿಎಲ್ ಷೇರುಗಳು ಗುರುವಾರ 152 ರೂ.ಗಳಿಗೆ ವಹಿವಾಟು ನಡೆಸಿದವು.
ಈ ತ್ರೈಮಾಸಿಕದಲ್ಲಿ ಸಂಸ್ಥೆ 29,720 ಕೋಟಿ ರೂ. ಆದಾಯ ದಾಖಲಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿನ ಆದಾಯ 25,601 ಕೋಟಿ ರೂ.ಗಳು.
ಕಳೆದ 9 ತಿಂಗಳಲ್ಲಿ ಕಾರ್ಯಾಚರಣೆಯಿಂದ 76,661 ಕೋಟಿ ರೂ. ಆದಾಯ ದಾಖಲಿಸಿದ್ದು, ಹಿಂದಿನ ಇದೇ ಅವಧಿಯಲ್ಲಿ ಇದು 81,676 ಕೋಟಿ ರೂ. ಆಗಿತ್ತು. ಈ ಅವಧಿಯಲ್ಲಿ ಒಟ್ಟು 2,786 ಕೋಟಿ ರೂ. ಲಾಭ ಗಳಿದ್ದು , (ಕಳೆದ ಬಾರಿ 471 ಕೋಟಿ ರೂ.), ನಿವ್ವಳ ಲಾಭ 1,812 ಕೋಟಿ ರೂ.(ಕಳೆದ ಬಾರಿ 313 ಕೋಟಿ ರೂ.) ಗಳಾಗಿದೆ.
ಕಚ್ಚಾತೈಲ ಸಂಗ್ರಹ ತ್ರೈಮಾಸಿಕದಲ್ಲಿ 4.70 ಮಿಲಿಯನ್ ಮೆಟ್ರಿಕ್ ಟನ್ ಆಗಿದ್ದು, 9 ತಿಂಗಳಲ್ಲಿ ಒಟ್ಟು 13.54 ಮಿಲಿಯನ್ ಮೆಟ್ರಿಕ್ ಟನ್ ಆಗಿದೆ. ಇದೇ ಮೊದಲ ಬಾರಿಗೆ ಲಿಬಿಯಾದಿಂದ ಕಚ್ಚಾತೈಲ ಆಮದಾಗಿದ್ದು, ಡಿ.25ರಂದು ಐಎಸ್ಪಿಆರ್ನ ಭೂಗತ ತೈಲಾಗಾರದಲ್ಲಿ ಕಚ್ಚಾತೈಲ ಸಂಗ್ರಹಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?
ವೆನಿಜುವೆಲಾದ ಮೇಲೆ ದಾಳಿ