ಗೌತಮ್ ಅದಾನಿ ಮಾಲಿಕತ್ವದ ಪ್ರಮುಖ ಕಂಪನಿ ಅದಾನಿ ಎಂಟರ್ಪ್ರೈಸಸ್ನ 25,000 ಕೋಟಿ ರೂಪಾಯಿ ಮೌಲ್ಯದ ರೈಟ್ ಇಶ್ಯೂ ವಿತರಣೆಗೆ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನವೆಂಬರ್ 25 ರಂದು ಇಶ್ಯೂ ಆರಂಭವಾಗಿದ್ದು , ಡಿಸೆಂಬರ್ 10 ರಂದು ಶೇ. 108 ರಷ್ಟು ಚಂದಾದಾರಿಕೆಯೊಂದಿಗೆ ಮುಕ್ತಾಯಗೊಂಡಿದೆ.
ಬುಧವಾರ ಸಂಜೆ 5 ಗಂಟೆಯ ಹೊತ್ತಿಗೆ,ಈ ಇಶ್ಯೂಗೆ 13.85 ಕೋಟಿ ಷೇರುಗಳಿಗೆ ಬದಲಾಗಿ 14.95 ಕೋಟಿ ಷೇರುಗಳಿಗೆ ಬಿಡ್ಗಳು ಬಂದಿವೆ. ಸಾರ್ವಜನಿಕ ವಿಭಾಗದಲ್ಲಿ ಶೇ.30 ರಷ್ಟು ಓವರ್ಸಬ್ಸ್ಕ್ರೈಬ್ ಆಗಿದ್ದು, 3.6 ಕೋಟಿ ಷೇರುಗಳಿಗೆ ಬದಲಾಗಿ 4.7 ಕೋಟಿ ಬಿಡ್ಗಳು ಸಲ್ಲಿಕೆಯಾಗಿವೆ.
ಅದಾನಿ ಎಂಟರ್ಪ್ರೈಸಸ್ 138.5 ಮಿಲಿಯನ್ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ 1,800 ರೂ. ಮುಖಬೆಲೆಯೊಂದಿಗೆ ನೀಡಿದೆ.
News @ your fingertips
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್
ಫೆಡ್ ಬ್ಯಾಂಕ್ ನೀತಿ ಕುರಿತು ಕುತೂಹಲ