News @ your fingertips
News @ your fingertips
500 ಕೋಟಿ ನೀಡಿದವರು ಮುಖ್ಯಮಂತ್ರಿ ಹುದ್ದೆಗೇರುತ್ತಾರೆ ಎನ್ನುವ ಹೇಳಿಕೆ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಪಂಜಾಬ್ ವಿಧಾನಸಭೆಯ ಮಾಜಿ ಸದಸ್ಯೆ ನವಜೋತ್ ಕೌರ್ ಸಿಧು ಅವರನ್ನು ಸೋಮವಾರ ಕಾಂಗ್ರೆಸ್ ಔಟ್ ಮಾಡಿದೆ.
ಪಕ್ಷದ ರಾಜ್ಯ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಬಿಡುಗಡೆ ಮಾಡಿರುವ ಅಧಿಕೃತ ಆದೇಶದಲ್ಲಿ, ’ಡಾ. ನವಜೋತ್ ಕೌರ್ ಸಿಧು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ’ ಎಂದು ತಿಳಿಸಲಾಗಿದೆ.
ಪಿಟಿಐ ಪ್ರಕಾರ, ನವಜೋತ್ ಕೌರ್ ಸಿಧು ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮ್ಮ ಪತಿ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ನಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರಿಸಿದರೆ ಅವರು ಸಕ್ರಿಯ ರಾಜಕೀಯಕ್ಕೆ ಮರಳುತ್ತಾರೆ ಎಂದು ಹೇಳಿದರು.
ಯಾವುದೇ ಪಕ್ಷಕ್ಕೆ ದೇಣಿಗೆ ನೀಡಲು ಅವರ ಬಳಿ ಹಣವಿಲ್ಲ ಆದರೆ ಪಂಜಾಬ್ ಅನ್ನು ’ಸುವರ್ಣ ರಾಜ್ಯ’ವನ್ನಾಗಿ ಮಾಡಬಹುದು ಎಂದು ಅವರು ಹೇಳಿದರು.
ನಾವು ಯಾವಾಗಲೂ ಪಂಜಾಬ್ ಮತ್ತು ಪಂಜಾಬಿಯತ್ ಪರವಾಗಿ ಮಾತನಾಡುತ್ತೇವೆ. ಆದರೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ನಾವು 500 ಕೋಟಿ ನೀಡುವುದಿಲ್ಲ ಎಂದು ಅವರು ಹೇಳಿದರು .
ಅದಕ್ಕೂ ಮುನ್ನ ಅವರು ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಲಾದ ಸಮಸ್ಯೆಗಳನ್ನು ಚರ್ಚಿಸಿದರು.
ಯಾರಾದರೂ ಸಿಧು ಅವರಿಂದ 500 ಕೋ.ರೂ.ಬೇಡಿಕೆ ಇಟ್ಟಿದ್ದಾರೆಯೇ ಎನ್ನುವ ಪ್ರಶ್ನೆಗೆ , ಯಾರೂ ಬೇಡಿಕೆ ಇಟ್ಟಿಲ್ಲ. ಅದರೆ 500 ಕೋಟಿ ಸೂಟ್ಕೇಸ್ ನೀಡಿದವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು.
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್
ಅದಾನಿ ರೈಟ್ ಇಶ್ಯೂ ಭಾರೀ ಬೇಡಿಕೆ