News @ your fingertips
News @ your fingertips
ಯಶಸ್ವಿ ಜೈಸ್ವಾಲ್ ಅವರ ಚೊಚ್ಚಲ ಏಕದಿನ ಶತಕ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರ ಭರ್ಜರಿ ಅರ್ಧಶತಕಗಳೊಂದಿಗೆ ಭಾರತ ತಂಡ ಏಕ ದಿನ ಕ್ರಿಕೆಟ್ ಸರಣಿಯಲ್ಲಿ ದಕ್ಷಿಣ ಅಫ್ರಿಕಾ ತಂಡ ವಿರುದ್ದ 9 ಜಯ ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡು 47.5 ಒವರ್ಗಳಲ್ಲಿ 270 ರನ್ ಗಳಿಸಲು ಸಾಧ್ಯವಾಯಿತು. 270 ರನ್ ಗಳ ಬೆನ್ನಟ್ಟಿದ ಭಾರತ ಚೇಸಿಂಗ್ನಲ್ಲಿ ಪ್ರಾಬಲ್ಯ ಸಾಧಿಸಿ ಕೇವಲ ಒಂದು ವಿಕೆಟ್ ಕಳೆದುಕೊಂಡು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಭಾರತ 2-1ರಿಂದ ಗೆಲವಿನಿಂದ ಸರಣಿ ಗೆದ್ದುಕೊಂಡಿತು.
ಮೊದಲು ಟಾಸ್ ಗೆದ್ದ ಭಾರತೀಯ ನಾಯಕ ಕೆಎಲ್ ರಾಹುಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇದು ಕೂಡಾ ಭಾರತ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಕುಲ್ದೀಪ್ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 4 ವಿಕೆಟ್ಗಳನ್ನು ಪಡೆದು ದಕ್ಷಿಣ ಆಫ್ರಿಕಾ ತಂಡದ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶೇಷವಾಗಿ ಕ್ವಿಂಟನ್ ಡಿ ಕಾಕ್ ಉತ್ತಮ ಪ್ರದರ್ಶನ ನೀಡಿ 106 ರನ್ ಗಳಿಸಿದಾಗ, ಭಾರತೀಯ ಬೌಲರ್ಗಳು ಒತ್ತಡದಲ್ಲಿರುವಂತೆ ಕಂಡು ಬಂತು. ಆದರೆ ಕಾಕ್ ಪ್ರಸಿದ್ದ್ ಕೃಷ್ಣ ಗೆ ವಿಕೆಟ್ ಒಪ್ಪಿದಾಗ , ದಕ್ಷಿಣ ಆಫ್ರಿಕಾ ಕುಸಿತ ಆರಂಭವಾಯಿತು. ಬಳಿಕ ಭಾರತದ ಉತ್ತಮ ಬೌಲಿಂಗ್ , ಫೀಲ್ಡಿಂಗ್ ದಕ್ಷಿಣ ಅಫ್ರಿಕಾ ತಂಡವನ್ನು ಕಟ್ಟಿ ಹಾಕಿತು.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?