News @ your fingertips
News @ your fingertips
ಮೂರು ಪ್ರಮುಖ ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿದ ನಂತರ ಉಮೇದಿನಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ತತ್ಕ್ಷಣದಲ್ಲಿ ಮತ್ತೆ ಸಾರ್ವತ್ರಿಕ ಚುನಾವಣೆ ನಡೆದರೆ 324 ಸ್ಥಾನಗಳೊಂದಿಗೆ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ತಿಳಿಸಿದೆ.
ಕಳೆದ ಚುನಾವಣೆಯಲ್ಲಿ 234 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ 208 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಗಳಿವೆ ಎಂದು ಸಮೀಕ್ಷೆ ಅಂದಾಜಿಸಿದೆ.
ಜುಲೈ 1 ರಿಂದ ಆಗಸ್ಟ್ 14 ರ ನಡುವೆ ದೇಶದ್ಯಾದಂತ ನಡೆಸಲಾದ ಸಮೀಕ್ಷೆಯಲ್ಲಿ 2,06,826 ಮಂದಿಯ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ, ಇಂಡಿಯಾ ಒಕ್ಕೂಟ ಬಿಜೆಪಿಯ ಸ್ಥಾನಗಳ ಸಂಖ್ಯೆಯನ್ನು 240 ಕ್ಕೆ ಸೀಮಿತಗೊಳಿಸಿತ್ತು. ಸರಳ ಬಹುಮತಕ್ಕೆ 272 ಸ್ಥಾನ ಗಳಿಸಬೇಕಿದ್ದು, ಅದಕ್ಕಿಂತ ಕಡಿಮೆಯಾಗಿತ್ತು. ಅದರೆ ಬಿಜೆಪಿ ತನ್ನ ಮಿತ್ರ ಪಕ್ಷಗಳ ಸಹಾಯದಿಂದ ಎನ್ಡಿಎ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಎನ್ಡಿಎ ಸಂಖ್ಯೆ 293 ತಲುಪಿದರೆ , ಇಂಡಿಯಾ ಒಕ್ಕೂಟ 234 ಸ್ಥಾನಗಳಿಗೆ ಸೀಮಿತವಾಯಿತು.
ಅಂದಿನಿಂದ ವಿರೋಧ ಪಕ್ಷಗಳ ಬಣದ ಸಾಮಾರ್ಥ್ಯ ಕುಸಿಯುತ್ತಲೇ ಬರುತ್ತಿದೆ. ಇದೇ ಹೊತ್ತಿನಲ್ಲಿ ಹರಿಯಾಣ, ಮಹಾರಾಷ್ಟ್ರ ಮತ್ತು ದೆಹಲಿ ಪ್ರಮುಖ ರಾಜ್ಯ ಚುನಾವಣೆಗಳಲ್ಲೂ ಸಾಕಷ್ಟು ಹಿನ್ನಡೆ ಕಂಡಿತು.
ಫೆಬ್ರವರಿ ಸಮೀಕ್ಷೆಯು ಎನ್ಡಿಎ 343 ಸ್ಥಾನಗಳಿಸಬಹುದು ಎಂದು ಅಂದಾಜಿಸಿತ್ತು, ಪ್ರಸ್ತುತ ಸಮೀಕ್ಷೆಯು 324 ಸ್ಥಾನಗಳನ್ನು ಗಳಿಸಲು ಸಾಧ್ಯ ಎಂದು ವರದಿ ಮಾಡಿದೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?