7 rupees

News @ your fingertips

ಪುರಿ ದೇವಾಲಯಕ್ಕೆ ಬೆದರಿಕೆ ಕರೆ

ಭಯೋತ್ಪಾದಕರು ಜಗನ್ನಾಥ ದೇವಾಲಯವನ್ನು ಕೆಡವುತ್ತಾರೆ ಎನ್ನುವ ಎರಡು ಬೆದರಿಕೆ ಬರಹಗಳು ಪುರಿಯಲ್ಲಿನ 12 ನೇ ಶತಮಾನದ ದೇವಾಲಯವೊಂದರ ಬಳಿಯ ಸಣ್ಣ ದೇವಾಲಯದ ಗೋಡೆಯ ಮೇಲೆ ಕಂಡುಬಂದಿವೆ ಎಂದು ಒಡಿಶಾ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಒಂದು ಬರಹದಲ್ಲಿ, ಭಯೋತ್ಪಾದಕರು ಶ್ರೀಮಂದಿರವನ್ನು ಕೆಡವುತ್ತಾರೆ. ನನಗೆ ಕರೆ ಮಾಡಿ, ಇಲ್ಲದಿದ್ದರೆ ವಿನಾಶ ಸಂಭವಿಸುತ್ತದೆ ಎಂದು ಬರೆಯಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಬಾಲಿ ಸಾಹಿಯಲ್ಲಿರುವ ಮಾ ಬುಧಿ ಠಾಕುರಾನಿ ದೇವಾಲಯದ ಗೋಡೆಯ ಮೇಲೆ ಒಡಿಯಾ ಭಾಷೆಯಲ್ಲಿ ಬರೆದ ಬರಹಗಳು ಕಂಡುಬಂದಿವೆ. ದೇವಾಲಯದ ಗೋಡೆಯ ಮೇಲೆ ಹಲವಾರು ಫೋನ್‌ನಂಬರ್‌ಗಳನ್ನು ಬರೆಯಲಾಗಿದೆ. ಜೊತೆಯಲ್ಲಿ ’ಪಿಎಂ ಮೋದಿ’, ’ದೆಹಲಿ’ ಮುಂತಾದ ಪದಗಳು ಕೂಡಾ ಕಂಡು ಬಂದಿವೆ ಎಂದು ಪುರಿ ನಿವಾಸಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕೃತ್ಯವನ್ನು ಎಸಗಿದವರನ್ನು ಗುರುತಿಸಲಾಗುವುದು. ಈಗಾಗಲೇ ವಿಶೇಷ ತಂಡ ರಚಿಸಲಾಗಿದ್ದು , ಒಂದಿಷ್ಟು ಸುಳಿವುಗಳು ಲಭ್ಯವಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.