News @ your fingertips
News @ your fingertips
ನೇಪಾಳದ ಕೆಲವು ಭಾಗಗಳಲ್ಲಿ ಭೀಕರ ಪ್ರವಾಹ ಉಂಟಾದ ನಂತರ ಸಾವನ್ನಪ್ಪಿದವರ ಸಂಖ್ಯೆ 350 ದಾಟಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ನೆರೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಭರದಿಂದ ಮುಂದುವರೆದಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾಣೆಯಾಗಿದ್ದ 21 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಸರ್ಕಾರ ಗುರುವಾರ ತಿಳಿಸಿದೆ, ಆದರೆ ಇನ್ನೂ 288 ಭಾರತೀಯ ಪ್ರಜೆಗಳು ಸಂಪರ್ಕಕ್ಕೆ ಲಭ್ಯವಾಗಿಲ್ಲ ಎಂದು ಮಾಹಿತಿಗಳು ತಿಳಿಸಿವೆ.
ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಹಠಾತ್ ಪ್ರವಾಹದಿಂದ ಹಾನಿಗೊಳಗಾದ ಭಾರತೀಯ ಪ್ರಜೆಗಳಿಗೆ ಸಂಬಂಧಿಸಿದ ಸಹಾಯ ಮತ್ತು ಮಾಹಿತಿಗಾಗಿ ತುರ್ತು ಸೇವೆಯನ್ನು ಆರಂಭಿಸಿದೆ.
ನೇಪಾಳದಲ್ಲಿ ಪ್ರವಾಹ ಉಂಟಾಗಿರುವುದರಿಂದ ಸುಮಾರು 200 ಭಾರತೀಯರು ಸ್ಥಳಾಂತರಗೊಳ್ಳಲು ಪ್ರಯತ್ನಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಮಧ್ಯೆ ಈ ದುರ್ಘಟನೆಯಲ್ಲಿ ಸಿಲುಕಿರುವ ಜನರ ನೆರವಿಗೆ ಭಾರತ ಮುಂದಾಗಿದೆ. ತುರ್ತು ಪರಿಹಾರ ಸಾಮಗ್ರಿಗಳನ್ನು ಹೊಂದಿರುವ ಎರಡು ವಿಮಾನಗಳನ್ನು ನೇಪಾಳಕ್ಕೆ ಕಳುಹಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ನೇಪಾಳದಲ್ಲಿ ಸಂವಹನ ಮಾರ್ಗಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ ಎಂದಿರುವ ನೇಪಾಳ ವಿದೇಶಾಂಗ ಸಚಿವಾಲಯ ಪ್ರವಾಹ ಸಂತ್ರಸ್ತರಿಗಾಗಿ ವಿದೇಶಾಂಗ ಸಚಿವಾಲಯದಲ್ಲಿ ವಿಶೇಷ ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಲಾಗಿದೆ ಎಂದು ತಿಳಿಸಿದೆ.
More Stories
5 ನಿಮಿಷದಲ್ಲಿ 6 ರೂ.ಯಿಂದ 1000 ರೂ.ಗಳಿಗೆ ಜಗಿದ ಬ್ಯಾಂಕೆಕ್ಸ್ ‘ಪುಟ್ ‘
ಸುಭಾಷ್ಚಂದ್ರಗೆ ಬಿಗ್ ರಿಲೀಫ್ , ಕೇವಲ 6.5 ಕೋ .ಸಾಲ ಪಾವತಿಗೆ ಸಮ್ಮತಿ
ಕರ್ಣಾಟಕ ಬ್ಯಾಂಕ್ ಸಾರ್ವಕಾಲಿಕ ದಾಖಲೆ : ಲಾಭದಲ್ಲಿ ಶೇ 43ರಷ್ಟು ಹೆಚ್ಚಳ