News @ your fingertips
News @ your fingertips
ಖಾಸಗಿ ಇಕ್ವಿಟಿ ಸಂಸ್ಥೆ ಬೈನ್ ಕ್ಯಾಪಿಟಲ್ ಎಮ್ಕ್ಯೂರ್ ಫಾರ್ಮಾದಲ್ಲಿನ ತನ್ನ ಶೇಕಡಾ 1 ರಷ್ಟು ಪಾಲನ್ನು ಮಾರಾಟ ಮಾಡಿದೆ.
ಈ ಪಾಲನ್ನು ಎಚ್ಡಿಎಫ್ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಶುರೆನ್ಸ್ಸ್, ಆಕ್ಸಿಸ್ ಮ್ಯೂಚುಯಲ್ ಫಂಡ್ ಮತ್ತು ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುಯಲ್ ಫಂಡ್ ಸೇರಿದಂತೆ ಸಾಂಸ್ಥಿಕ ಹೂಡಿಕೆದಾರರು ಖರೀದಿಸಿದ್ದಾರೆ.
ಹನ್ನೆರಡು ವರ್ಷಗಳ ನಂತರ, ಅಮೆರಿಕದ ಈ ಪ್ರಮುಖ ಖಾಸಗಿ ಇಕ್ವಿಟಿ ಸಂಸ್ಥೆ ಬೈನ್ ಕ್ಯಾಪಿಟಲ್ ಪುಣೆ ಮೂಲದ ಔಷಧ ತಯಾರಕ ಕಂಪನಿ ಎಮ್ಕ್ಯೂರ್ ಫಾರ್ಮಾದಿಂದ ಸಂಪೂರ್ಣವಾಗಿ ನಿರ್ಗಮಿಸಿದೆ. ಬೈನ್ ಕ್ಯಾಪಿಟಲ್ ಎಮ್ಕ್ಯೂರ್ ಫಾರ್ಮಾದ 19.4 ಲಕ್ಷ ಷೇರುಗಳನ್ನು 352 ಕೋಟಿ ರೂ.ಗೆ ಮಾರಾಟ ಮಾಡಿದೆ.
ಅಂಕಿ- ಅಂಶಗಳ ಪ್ರಕಾರ ಷೇರುಗಳನ್ನು ತಲಾ 1,817 ರೂ.ಗಳ ಸರಾಸರಿ ಬೆಲೆಗೆ ಮಾರಾಟ ಮಾಡಲಾಗಿದೆ.
ಖರೀದಿದಾರರಲ್ಲಿ, ಎಚ್ಡಿಎಫ್ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಶುರೆನ್ಸ್ಸ್ 7.1 ಲಕ್ಷ ಷೇರುಗಳನ್ನು 130 ಕೋಟಿ ರೂ.ಗೆ , ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುಯಲ್ ಫಂಡ್ 47.5 ಕೋಟಿ ರೂ.ಗೆ 2.6 ಲಕ್ಷ ಷೇರುಗಳನ್ನು ಖರೀದಿದೆ. ಆಕ್ಸಿಸ್ ಮ್ಯೂಚುಯಲ್ ಫಂಡ್ ಕೂಡ 50 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿತು. ಇತರ ಸಾಂಸ್ಥಿಕ ಖರೀದಿದಾರರಲ್ಲಿ ಎಚ್ಎಸ್ಬಿಸಿ ಮ್ಯೂಚುಯಲ್ ಫಂಡ್, ಗೋಲ್ಡ್ಮನ್ ಸ್ಯಾಚ್ಸ್ , ಮಾರ್ಗನ್ಸ್ಟಾನ್ಲಿ ಮತ್ತು ಬಿಎನ್ಪಿ ಪರಿಬಾಸ್ ಸೇರಿವೆ. ಇವು ತಲಾ 25 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿವೆ.
More Stories
ವಾಣಿಜ್ಯ ಅನಿಲ ಪೂರೈಕೆ ಸಹಜ ಸ್ಥಿತಿಗೆ, ನಿರ್ಬಂಧ ತೆರವು
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್