7 rupees

News @ your fingertips

ಟ್ರಂಪ್ – ಪುಟಿನ್ ಚರ್ಚೆ ಸಾಧ್ಯತೆ

ರಷ್ಯಾ ಜೊತೆಗಿನ ಯುದ್ಧದಲ್ಲಿ ಹೆಚ್ಚಿನ ಬೆಂಬಲವನ್ನು ಪಡೆಯಲು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶ್ವೇತಭವನಕ್ಕೆ ಭೇಟಿ ನೀಡುವ ಕಾರ್ಯಕ್ರಮದ ಒಂದು ದಿನ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ರಷ್ಯಾದ ವಾಯು ದಾಳಿಯ ಸರಣಿಯನ್ನು ತಡೆಯಲು ನ್ಯಾಟೋ ಹೆಣಗಾಡುತ್ತಿದೆ. ಇದೇ ಹೊತ್ತಿಗೆ ಕೈವ್ ಮತ್ತು ಮಾಸ್ಕೋ ಇಂಧನ ವ್ಯವಸ್ಥೆಗಳ ಮೇಲೆ ಬೃಹತ್ ದಾಳಿಗಳೊಂದಿಗೆ ಯುದ್ಧವನ್ನು ತೀವ್ರ ಗೊಳಿಸಲು ಇನ್ನಷ್ಟು ಮಿಲಿಟರಿ ಬೆಂಬಲಕ್ಕಾಗಿ ಮನವಿ ಮಾಡಲು ಝೆಲೆನ್ಸ್ಕಿ ಅವರು ಟ್ರಂಪ್ ಅವರನ್ನು ಭೇಟಿ ಮಾಡಬಯಸಿದ್ದಾರೆ.
ಉಕ್ರೇನ್ ಯುಎಸ್‌ನ ಟೊಮಾಹಾಕ್ ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ.
ಇದೇ ಸಂದರ್ಭದಲ್ಲಿ ಪುಟಿನ್ ಮಾತುಕತೆ ವ್ಯಾಪ್ತಿಗೆ ಬರಲು ವಿಫಲವಾದರೆ ಅಮೆರಿಕಾ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಬಹುದು ಎಂದು ಟ್ರಂಪ್ ಹೇಳಿದ್ದಾರೆ.