7 rupees

News @ your fingertips

ಸ್ಟಾಕ್ ಬ್ರೋಕಿಂಗ್ ಗ್ರೋವ್ ಐಪಿಒ

ಸ್ಟಾಕ್ ಬ್ರೋಕಿಂಗ್ ಮತ್ತು ವೆಲ್ತ್ ಮೆನೇಜ್‌ಮೆಂಟ್ ಸಂಸ್ಥೆಯಾಗಿರುವ ಗ್ರೋವ್ ಸದ್ಯದಲ್ಲೇ ಐಪಿಒ ಮೂಲಕ ಮಾರುಕಟ್ಟೆ ಪ್ರವೇಶಿಸಲಿದೆ.
ಸೆೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಐಪಿಒ ಅನುಮೋದನೆ ನೀಡಿದೆ. ಇದು 1 ಬಿಲಿಯನ್‌ನಷ್ಟು ಬಂಡವಾಳ ಸಂಗ್ರಹಿಸಲು ಸಹಾಯ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಫಿನ್‌ಟೆಕ್ ಕಂಪೆನಿಯಾಗಿರುವ ಗ್ರೋವ್ ಮೇ 26 ರಂದು ಸೆಬಿ ಗೆ ಐಪಿಒ ಅರ್ಜಿ ಸಲ್ಲಿಸಿತ್ತು.
ಕಂಪೆನಿ 2 ರೂ.ಮುಖಬೆಲೆಯ ಈಕ್ವಿಟಿ ಷೇರುಗಳನ್ನು ನೀಡಲಿದ್ದು , ಎನ್‌ಎಸ್‌ಸಿ ಹಾಗೂ ಬಿಎಸ್‌ಸಿ ಗಳಲ್ಲಿ ಲಿಸ್ಟಿಂಗ್‌ಆಗಲಿದೆ. ಇಶ್ಯೂ ಗಾತ್ರ, ದರ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ.