News @ your fingertips
News @ your fingertips
ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲುೃ) ವಂಚನೆ ಪ್ರಕರಣ ದಾಖಲಿಸಿದೆ.
ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ನ ನಿರ್ದೇಶಕ ಉದ್ಯಮಿ ದೀಪಕ್ ಕೊಠಾರಿ ಸಲ್ಲಿಸಿದ ದೂರಿನಲ್ಲಿ, ಈ ಘಟನೆ 2015 ಮತ್ತು 2023 ರ ನಡುವೆ ನಡೆದಿದೆ ಎಂದು ಹೇಳಲಾಗಿದೆ. ಈ ದಂಪತಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸುವ ನೆಪದಲ್ಲಿ ಹಣವನ್ನು ತೆಗೆದುಕೊಂಡು ಅದನ್ನು ವೈಯಕ್ತಿಕ ಖರ್ಚುಗಳಿಗೆ ಬಳಸಿಕೊಂಡಿದ್ದಾರೆ ಎಂದು ಕೊಠಾರಿ ಆರೋಪಿಸಿದ್ದಾರೆ.
2015 ರಲ್ಲಿ, ಶೆಟ್ಟಿ ಮತ್ತು ಕುಂದ್ರಾ ಲೈಫ್ಸ್ಟೈಲ್ ಉತ್ಪನ್ನಗಳನ್ನು ಉತ್ತೇಜಿಸುವ ಮತ್ತು ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ ಅನ್ನು ನಡೆಸುತ್ತಿದ್ದ ತಮ್ಮ ಕಂಪನಿಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ಗೆ 75 ಕೋಟಿ ರೂ. ಸಾಲವನ್ನು ಕೋರಿ ಮಧ್ಯವರ್ತಿಯ ಮೂಲಕ ಕೊಠಾರಿಯವರನ್ನು ಸಂಪರ್ಕಿಸಿದ್ದರು. ಪ್ರಸ್ತಾವಿತ ಬಡ್ಡಿದರವು ಶೇ. 12 ರಷ್ಟಿತ್ತು . ಅದನ್ನು ಉದ್ಯಮ ವಿಸ್ತರಿಸದ, ತನ್ನ ವೈಯಕ್ತಿಕ ವಹಿವಾಟುಗಳಿಗೆ ಬಳಸಿಕೊಂಡಿದ್ದಾರೆ ಎಂದು ಎಂದು ಆರೋಪದಲ್ಲಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
More Stories
‘ಕೊರಗಜ್ಜ ’ತಂಡದಿಂದ ಅದ್ದೂರಿಯ ಕೋಲ
100 ಕೋಟಿ ಕ್ಲಬ್ಗೆ ಸು ಫ್ರಮ್ ಸೋ