7 rupees

News @ your fingertips

ಹರಿಯಾಣ ಮತದಾನ ದಿನಾಂಕ ಮರು ನಿಗದಿ

ಹರಿಯಾಣ ವಿಧಾನಸಭಾ ಚುನಾವಣೆ ಮತದಾನವನ್ನು ಆಕ್ಟೋಬರ್ 5ಕ್ಕೆ ಮರು ನಿಗದಿಪಡಿಸಲಾಗಿದೆ.
ಈ ಹಿಂದೆ ಆಕ್ಟೋಬರ್ 1ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿತ್ತು. ಹರಿಯಾಣ ರಾಜ್ಯದಲ್ಲಿ ಬಿಷ್ಣೋಯ್ ಸಮೂದಾಯ ಶತಮಾನಗಳಿಂದ ಆಚರಿಸಿಕೊಂಡು ಬರುತ್ತಿರುವ ಅಮಾವಾಸ್ಯ ಹಬ್ಬ ಆಕ್ಟೋಬರ್ 1ರಂದು ಬರಲಿದ್ದು , ಆಂದು ಚುನಾವಣೆ ನಡೆಸಿದರೆ ಮತದಾನ ಪ್ರಮಾಣ ಕಡಿಮೆಯಾಗುವ ಸಾಧ್ಯತಗಳಿವೆ ಎನ್ನುವುದನ್ನು ಮನಗಂಡು ಮತದಾನವನ್ನು ಆಕ್ಟೋಬರ್ 5ರಂದು ನಿಗದಿಪಡಿಸಲಾಗಿದೆ ಎಂದು ಆಯೋಗ ತಿಳಿದಿದೆ.
ಹಬ್ಬದ ದಿನ ಚುನಾವಣೆ ನಡೆಸಿದರೆ , ಜನರ ಮತದಾನ ಹಕ್ಕನ್ನು ನಿರಾಕರಿಸಿದಂತಾಗುತ್ತದೆ ಎಂದು ವಿವಿಧ ಸಂಘಟನೆಗಳಿಂದ ಬಂದ ಮನವಿಯನ್ನು ಪರಿಗಣಿಸಿರುವ ಆಯೋಗ ಈ ನಿರ್ಧಾರಕ್ಕೆ ಬಂದಿದೆ.
ಜಮ್ಮು ಕಾಶ್ಮೀರ ಹಾಗೂ ಹರಿಯಾಣದ ಚುನಾವಣೆಯ ಮತಎಣಿಕೆ ಅಕ್ಟೋಬರ್ 4ರ ಬದಲು ಆ.8ರಂದು ನಡೆಸಲು ತೀರ್ಮಾನಿಸಲಾಗಿದೆ.

× Subscribe us