News @ your fingertips
News @ your fingertips
ಈಗ ಉಪರಾಷ್ಟ್ರಪತಿ ಚುನಾವಣೆ ರಾಜಕೀಯ ರಂಗು ಏರಿದೆ. ಬಹುಮತ ಹೊಂದಿರುವ ಬಿಜೆಪಿ ನೇತೃತ್ವದ ಎನ್ಡಿ ಎ ಈಗಾಗಲೇ ಸಿಪಿ ರಾಧಾಕೃಷ್ಣನ್ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರ ಆಯ್ಕೆಯಲ್ಲಿ ಯಾವುದೇ ಶಂಕೆ ಇಲ್ಲ. ಆದರೂ ಸ್ಪರ್ಧೆ ಮಾಡಬೇಕೆನ್ನುವ ಬಯಕೆಯಲ್ಲಿ ವಿರೋಧಿ ಬಣ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತರ ಮಿತ್ರಪಕ್ಷಗಳೊಂದಿಗೆ ನಡೆಸಿದ ಸಭೆಯಲ್ಲಿ ವಿರೋಧ ಪಕ್ಷದ ಬಣದ ಆಯ್ಕೆಯ ಹೆಸರನ್ನು ಪ್ರಕಟಿಸಿದರು.
ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ.
ರಾಧಾಕೃಷ್ಣನ್ ಅವರನ್ನು ಗೆಲ್ಲಿಸಲು ಆಡಳಿತಾರೂಢ ಎನ್ಡಿಎ ಸಾಕಷ್ಟು ಮತಗಳನ್ನು ಹೊಂದಿದೆ. 781 ಸದಸ್ಯರ ಚುನಾವಣಾ ರಂಗದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 424 ಸದಸ್ಯರೊಂದಿಗೆ ಸ್ಪಷ್ಟ ಮುನ್ನಡೆಯಲ್ಲಿದೆ.
ಅದರೂ ವಿರೋಧ ಪಕ್ಷದ ಇಂಡಿಯಾ ಕೂಟ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗೆಗಿನ ತನ್ನ ಬದ್ಧತೆಯನ್ನು ಎತ್ತಿ ಹಿಡಿಯುವ ಬಯಕೆಯೊಂದಿಗೆ ರಾಜಕೀಯೇತರ ನಾಯಕನನ್ನು ಕಣಕ್ಕಿಳಿಸುತ್ತಿರುವುದಾಗಿ ಹೇಳಿದೆ.
ಸೋಮವಾರ ಖರ್ಗೆ ಅವರ ನಿವಾಸದಲ್ಲಿ ನಡೆದ ಇಂಡಿಯ ಕೂಟದ ಸಭೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ರೆಡ್ಡಿ ಅವರ ಹೆಸರನ್ನು ಮುಂದಿಟ್ಟಿತು ಎಂದು ತಿಳಿದುಬಂದಿದೆ.
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್
ಅದಾನಿ ರೈಟ್ ಇಶ್ಯೂ ಭಾರೀ ಬೇಡಿಕೆ