News @ your fingertips
News @ your fingertips
ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಿದ ನಂತರ ದೇಶೀಯ ವಿಮಾನಯಾನ ಸಂಸ್ಥೆಗಳಲ್ಲಿ ನಿರ್ವಹಣೆ ಸಂಬಂಧಿಸಿದ ಹಲವಾರು ಲೋಪ ದೋಷಗಳನ್ನು ಕಂಡು ಹಿಡಿದಿದ್ದು , ಅವುಗಳನ್ನು ತಕ್ಷಣದಲ್ಲಿ ಸರಿಪಡಿಸುವಂತೆ ಸೂಚನೆ ನೀಡಿದೆೆ.
ವಿಮಾನಯಾನ ನಿರ್ವಹಣೆಯಲ್ಲಿ ಹಲವು ದೋಷಗಳು ಕಾಣಿಸಿಕೊಂಡಿವೆ. ಕೆಲವೊಂದು ಪುನರಾವರ್ತಿತ ಲೋಪಗಳು . ಅವುಗಳನ್ನು ಸಕಾಲದಲ್ಲಿ ಸರಿಪಡಿಸಲು ಕ್ರಮಗಳ ಅಗತ್ಯವಿದೆ ಎಂದು ನಿರ್ದೇಶನಾಲಯ ಜೂನ್‌ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಿದ ನಂತರ ವಿಮಾನ ನಿಲ್ದಾಣ ನಿರ್ವಾಹಕರಿಗೆ ಸುರಕ್ಷತಾ ಸಮಸ್ಯೆಗಳನ್ನು ಸರಿಪಡಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ.
ತಪಾಸಣೆ ಸಮಯದಲ್ಲಿ ಗಮನಿಸಿದ ಎಲ್ಲಾ ಲೋಪಗಳನ್ನು ಏಳು ದಿನಗಳಲ್ಲಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ನಿರ್ವಾಹಕರಿಗೆ ತಿಳಿಸಲಾಗಿದೆ ಎಂದು ಅದು ತಿಳಿಸಿದೆ.
ಜೂನ್ 19 ರಿಂದ ನಿರ್ದೇಶನಾಲಯದ ಅಧಿಕಾರಿಗಳು ದೇಶದ ಉನ್ನತ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಿದ್ದಾರೆ.ವಿಮಾನಯಾನ ಸಂಸ್ಥೆಗಳ ಲೆಕ್ಕಪರಿಶೋಧನೆ, ಗ್ರೌಂಡ್ ನಿರ್ವಹಣಾ ಕಂಪನಿಗಳು, ವಾಯು ಸಂಚಾರ ನಿಯಂತ್ರಣ ಘಟಕಗಳು ಮತ್ತು ನಿರ್ವಹಣೆ, ದುರಸ್ತಿ ಮುಂತಾದವುಗಳನ್ನು ಪರಿಶೀಲನೆ ನಡೆಸಿದ್ದಾರೆ.
More Stories
ಬಿರ್ಲಾ ಫ್ಯಾಷನ್ನಿಂದ ಫ್ಲಿಫ್ ಕಾರ್ಟ್ ಹೊರಗೆ
ಪಾಕ್ನಲ್ಲಿ ಭೂಕಂಪ ಕೈದಿಗಳ ಪರಾರಿ
ಐಪಿಎಲ್ ಪಂಜಾಬ್ ಟಾಸ್ , ಆರ್ಸಿಬಿ ಬ್ಯಾಟಿಂಗ್