News @ your fingertips
News @ your fingertips
ಪೇಟಿಎಂ ತನ್ನ ಪ್ರಮುಖ ಸಹ ಸಂಸ್ಥೆಯೊಂದರಲ್ಲಿ 50 ಕೋ. ರೂ. ಹೂಡಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ.
ಸಂಸ್ಥೆಗೆ ವಿದೇಶಿ ಸಂಸ್ಥೆಗಳ ಜೊತೆಗಿನ ಕೆಲವೊಂದು ಸಂಪರ್ಕಗಳ ಕಾರಣಕ್ಕೆ ಈ ಪ್ರಸ್ತಾವನೆ ಕೇಂದ್ರ ಸರಕಾರ ಬಳಿ ಬಹಳ ಸಮಯದಿಂದ ಬಾಕಿ ಉಳಿದಿತ್ತು. ಅದನ್ನು ಈಗ ಅಂತಿಮಗೊಳಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯದ ಮೂಲಗಳು ರೈಟರ್ ಸುದ್ದಿಜಾಲಕ್ಕೆ ತಿಳಿಸಿವೆ.
ಕೇಂದ್ರ ಸರಕಾರದ ಈ ನಿರ್ಧಾರದ ಬಳಿಕ ಪೇಟಿಎಂ ನ ಮಾತೃಸಂಸ್ಥೆ ವನ್97 ಕಮ್ಯುನಿಕೇಷನ್ಸ್‌ನ ಷೇರು ಬೆಲೆ ಏಕಾಏಕಿ ಜಂಪ್ ಹೊಡೆದಿದೆ. ಷೇರುಗಳು ಶೇ.10ರಷ್ಟು ಏರಿಕೆ ಕಂಡಿದ್ದು , ಅಪ್ಪರ್ ಸರ್ಕ್ಯುಟ್ ಹೊಂದಿದೆ. ಶುಕ್ರವಾರ ಬೆಲೆ 509.05 ರೂ. ಕಂಪೆನಿ ಮೇಲಿನ ಕೆಲವೊಂದು ದೂರಗಳ ಬಳಿಕ ಷೇರುಗಳು ಕುಸಿತ ಕಂಡಿದ್ದು ಫೆ.8ರ ಬಳಿಕ ಮೊದಲ ಬಾರಿಗೆ ಬೆಲೆ 500 ರೂ. ಗಡಿ ದಾಟಿದೆ.
ಪೇಮೆಂಟ್ ಸೇವೆಯಲ್ಲಿ ಪೇಟಿಎಂ ಅತ್ಯಂತ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ.
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ