7 rupees

News @ your fingertips

ಬಿರ್ಲಾ ಫ್ಯಾಷನ್‌ನಿಂದ ಫ್ಲಿಫ್ ಕಾರ್ಟ್ ಹೊರಗೆ

ಭಾರತ ಪ್ರಮುಖ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್‌ನಲ್ಲಿ ಹೊಂದಿರುವ ತನ್ನ ಶೇ. 6 ರಷ್ಟು ಪಾಲನ್ನು ಬ್ಲಾಕ್ ಡೀಲ್ ಮೂಲಕ ಮಾರಾಟಕ್ಕೆ ಚಿಂತನೆ ನಡೆಸಿದೆ.
ಬಿರ್ಲಾ ಫ್ಯಾಷನ್‌ನಲ್ಲಿ ಫ್ಲಿಪ್‌ಕಾರ್ಟ್ ಇನ್ವೆಸ್ಟ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಶೇ.6ರಷ್ಟು ಪಾಲನ್ನು ಹೊಂದಿದೆ.
ಬ್ಲಾಕ್ ಡೀಲ್‌ನಲ್ಲಿ ಪ್ರತಿ ಷೇರಿಗೆ 79.5ರೂ.ಯಂತೆ ಮಾರಾಟ ಮಾಡಲು ಯೋಜಿಸಲಾಗಿದೆ. ಸದ್ಯ ಬಿರ್ಲಾ ಫ್ಯಾಷನ್ 86 ರೂ.ಗಳಿಗೆ ವಹಿವಾಟು ನಡೆಸುತ್ತಿದೆ. ಅದರ ಶೇ.7.6 ರಷ್ಟು ರಿಯಾಯಿತಿ ರೂಪದಲ್ಲಿ ಷೇರುಗಳನ್ನು ಮಾರಾಟ ಮಾಡಲು ಚಿಂತಿಸಲಾಗಿದೆ. ಆಫರ್ ಗಾತ್ರವು ಸುಮಾರು 68 ಮಿಲಿಯನ್ ಆಗಿದೆ ಎಂದು ಮೂಲಗಳು ತಿಳಿಸಿವೆ.