7 rupees

News @ your fingertips

ಜೋಮಟೋ ಭರ್ಜರಿ ಲಾಭ

ಆಹಾರ ಸರಬರಾಜು ಮಾಡುವ ಜೋಮಟೋ ಕಂಪೆನಿ ಈ ಅರ್ಥಿಕ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಭರ್ಜರಿ ಲಾಭ ಗಳಿಸಿದೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಸಂಸ್ಥೆ ೨೫೩ ಕೋ.ರೂ.ಗಳ ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿ ಕೇವಲ ೨ ಕೋ.ರೂ. ಲಾಭ ಪಡೆದಿತ್ತು. ಕಳೆದ ಅವಧಿಗೆ ಹೋಲಿಸಿದರೆ ಲಾಭ ಪ್ರಮಾಣ ಶೇ.೧೨೬.೫ ಪಟ್ಟು ಜಾಸ್ತಿಯಾಗಿದೆ. ಒಟ್ಟು ಅದಾಯ ಶೇ.೭೪ ರಷ್ಟು ಹೆಚ್ಚಾಗಿದ್ದು , ೪೨೦೬ ಕೋ.ರೂ. ಗಳಿಗೇರಿದೆ. ಕಳೆದ ಸಾಲಿನಲ್ಲಿ ಅದು೨೪೧೬ ಕೋ.ರೂ.ಗಳಾಗಿತ್ತು. ಈ ಅವಧಿಯಲ್ಲಿ ಗ್ರಾಹಕರ ಪ್ರಮಾಣವೂ ಏರಿಕೆಯಾಗಿದ್ದು , ಕಂಪೆನಿಯ ಸಹ ಸಂಸ್ಥೆ ಬ್ಲಿಂಕ್‌ಇಟ್‌ನ ನಿರ್ವಹಣಾ ಅದಾಯ ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.
ಕಂಪೆನಿಯ ಬರುತ್ತಿರುವ ಪುಡ್‌ಆರ್ಡರ್‌ನಲ್ಲೂ ಶೇ.೧೩೦ ರಷ್ಟು ಏರಿಕೆಯಾಗಿದೆ. ಕಳೆದ ಕೆಲ ಸಮಯದ ಹಿಂದೆ ೮೧ ರೂ.ಗಳಿಗೆ ಇಳಿದಿದ್ದ ,ಕಂಪೆನಿಯ ಷೇರುಗಳು ಬುಧವಾರ ಗರಿಷ್ಟ ಮಟ್ಟ ೨೩೮ರೂ.ಗಳಿಗೆ ತಲುಪಿದವು.

× Subscribe us