7 rupees

News @ your fingertips

ಕೆಲಸ ಸಮಯ ಹೆಚ್ಚಳಕ್ಕೆ ಟೆಕ್ಕಿಗಳ ವಿರೋಧ

ಮಾಹಿತಿ ತಂತ್ರಜ್ಞಾನ ವಲಯದ ಉದ್ಯೋಗಿಗಳ ಕೆಲಸದ ಸಮಯವನ್ನು ಹೆಚ್ಚಿಸುವ ಸರಕಾರದ ನಿರ್ಧಾರ ವಿರೋಧಿಸಿ ಬೆಂಗಳೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೇರಿದ ಟೆಕ್ಕಗಳು ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಸರಕಾರದ ನಿಲವನ್ನು ಪ್ರತಿಭಟಿಸಿ , ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಸರಕಾರದ ಪರವಾಗಿ ಮನವಿ ಸ್ವೀಕರಿಸಿದ ಕಾರ್ಮಿಕ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಿ ಮಂಜುನಾಥ್ ವಿಷಯವನ್ನು ಸರಕಾರದ ಗಮನಕ್ಕೆ ಭರವಸೆಯನ್ನು ನೀಡಿದರು.
ದಿನಕ್ಕೆ 3 ಗಂಟೆ ಹೆಚ್ಚುವರಿ ಕೆಲಸ ಮಾಡುವ ಪ್ರಸ್ತಾವವನ್ನು ಸರಕಾರ ರೂಪಿಸಿದೆ. ಈಗ ದಿನಕ್ಕೆ 9 ಗಂಟೆ ಕೆಲಸ ಅವಧಿಯೆಂದು ನಿಗದಿ ಪಡಿಸಿದ್ದರೂ , 3 ಗಂಟೆ ಕಾಲ ಓವರ್ ಟೈಮ್ ಕೆಲಸಕ್ಕೆ ಹೊಸ ಕಾನೂನು ಅವಕಾಶ ಕಲ್ಪಿಸಲಿದೆ. ಅಂದರೆ ಉದ್ಯೋಗಿಗಳನ್ನು ದಿನಕ್ಕೆ 12 ಗಂಟೆ ದುಡಿಸಲು ಈ ಕಾನೂನು ಅವಕಾಶ ಕಲ್ಪಿಸಿಕೊಡಲಿದೆ.
ಈ ಪ್ರಸ್ತಾವಿತ ಕಾನೂನು ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದ್ದು , ಹಲವು ವಲಯಗಳಿಂದ ವಿರೋಧ ವೂ ವ್ಯಕ್ತವಾಗಿದೆ.

 

× Subscribe us