7 rupees

News @ your fingertips

ಕುಸಿತದ ಹಾದಿ ಹಿಡಿದ ಚಿನ್ನ , ಬೆಳ್ಳಿ

ಅಕ್ಟೋಬರ್ 24 ರಂದು ಶುಕ್ರವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಇಳಿಮುಖ ಕಂಡಿವೆ. ಏರುಗತಿಯಲ್ಲಿದ್ದ ಚಿನ್ನ ಬೆಳ್ಳಿ ಈಗ ಸ್ವಲ್ಪ ಇಳಿಕೆಯ ಹಾದಿಯಲ್ಲಿದೆ.
ಗುರುವಾರದ ವಹಿವಾಟಿನಲ್ಲಿ ಅಲ್ಪಾವಧಿಯ ಏರಿಕೆ ಕಂಡರೂ, ವ್ಯಾಪಾರದಲ್ಲಿ ಬೇಡಿಕೆೆ ಕಡಿಮೆಯಾಗಿತ್ತು. ಅದರ ಪರಿಣಾಮ ಚಿನ್ನದ ವ್ಯಾಪಾರಿಗಳು ತಮ್ಮ ವಹಿವಾಟನ್ನು ಕಡಿಮೆ ಮಾಡಿಕೊಂಡರು.
ಎಂಸಿಎಕ್ಸ್‌ನಲ್ಲಿ ಚಿನ್ನದ ಫ್ಯೂಚರ್ 10 ಗ್ರಾಂಗೆ 2,704ರೂ. ಅಂದರೆ ಸುಮಾರು ಶೇ. 2.2 ರಷ್ಟು ಕುಸಿತ ಕಂಡು ದಿನದ ಕನಿಷ್ಠ ಬೆಲೆ 121,400ರೂ.ಗಳಿಗೆ ತಲುಪಿತು. ಲಾಭದ ಬುಕಿಂಗ್ ನಡುವೆ ಚಿನ್ನ ಬೆಲೆ ಕುಸಿದು , ಕಡಿಮೆ ದರಕ್ಕೆ ಮುಕ್ತಾಯಗೊಂಡಿದೆ. ಕಳೆದ ಆರು ವಹಿವಾಟು ಅವಧಿಯಲ್ಲಿ ನಾಲ್ಕರಲ್ಲಿ ಚಿನ್ನ ಕುಸಿತ ಪರಿಣಾಮಕ್ಕೊಳಗಾಗಿದೆ. ಗರಿಷ್ಟ ಮಟ್ಟದಿಂದ ಈಗಾಗಲೇ ಶೇ. 4.42 ರಷ್ಟು ಬೆಲೆ ಇಳಿಕೆಯಾಗಿದೆ.
ಚಿನ್ನದ ಹಾದಿಯನ್ನು ಹಿಡಿದಿರುವ ಬೆಳ್ಳಿ ಕೂಡಾ ಫ್ಯೂಚರ್‌ನಲ್ಲಿ ಪ್ರತಿ ಕಿಲೋಗ್ರಾಂಗೆ 3,432 ರೂ. ಇಳಿಕೆ ಕಂಡು ಶೇ. 2.3ರಷ್ಟು ನಷ್ಟ ಅನುಭವಿಸಿದೆ. ಪ್ರತಿ ಕಿಲೋಗ್ರಾಂಗೆ 145,080 ರೂ.ಯಷ್ಟು ದಿನದ ಕನಿಷ್ಟ ಬೆಲೆ ದಾಖಲಿಸಿದೆ.
ಇತ್ತೀಚಿನ ವಹಿವಾಟುಗಳಲ್ಲಿ ಬೆಳ್ಳಿ ಭಾರೀ ಮಾರಾಟದ ಒತ್ತಡಕ್ಕೆ ಒಳಗಾಗಿದೆ. ಕಳೆದ ಐದು ವಹಿವಾಟುಗಳಲ್ಲಿ ನಾಲ್ಕರಲ್ಲಿ ಕುಸಿತ ಕಂಡು, ಒಟ್ಟಾರೆಯಾಗಿ ಶೇ. 11.5 ರಷ್ಟು ಇಳಿಕೆ ಕಂಡಿದೆ.