7 rupees

News @ your fingertips

ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ

ಸದಾ ವಿವಾದಗಳಿಗೆ ಸಿಲುಕುತ್ತಿರುವ ಅದಾನಿ ಸಮೂಹ ಸಂಸ್ಥೆ ಈಗ ಎಚ್ಚರಿಕೆ ಹೆಜ್ಜೆಗಳನ್ನಿಡಲು ಆರಂಭಿಸಿದೆ. ಅದಾನಿ ಪೋರ್ಟ್ಸ್ ಸಂಸ್ಥೆ ಶ್ರೀಲಂಕಾದಲ್ಲಿ ಬಂದರು ಅಭಿವೃದ್ದಿ ಯೋಜನೆಯ ಗುತ್ತಿಗೆ ಪಡೆದಿದೆ. ಈ ಯೋಜನೆಗಾಗಿ ಯುಎಸ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೋರೇಷನ್‌ನಿಂದ (ಡಿಎಫ್‌ಸಿ ) 553 ಮಿಯನ್ ಡಾಲರ್ ಅರ್ಥಿಕ ನೆರವು ಪಡೆಯಲು ಅದಾನಿ ಮುಂದಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಯಿಂದ ಸಂಸ್ಥೆ ಈಗ ಸಾಲದಿಂದ ಹಿಂಜರಿದಿದ್ದು , ತನ್ನ ಅಂತರಿಕ ವ್ಯವಸ್ಥೆಗಳಿಂದ ಯೋಜನೆಯನ್ನು ಪೂರ್ಣಗೊಳಿಸಲು ನಿರ್ಧರಿಸಿದೆ.
ಡಿಎಫ್‌ಸಿಯಿಂದ ಪಡೆಯಲು ಬಯಸಿದ್ದ ಅರ್ಥಿಕ ಸಹಾಯದಿಂದ ಈಗ ದೂರ ಸರಿದಿದ್ದು , ಕಂಪೆನಿ ಯೋಜನೆಗಾಗಿ ಅಂತರಿಕ ಹಣಕಾಸಿನ ವ್ಯವಸ್ಥೆಯನ್ನು ಮಾಡಿಕೊಳ್ಳಲು ಬಯಸಿದೆ. ಶ್ರೀಲಂಕಾದ ಯೋಜನೆ ಪೂರ್ಣ ಪ್ರಮಾಣದಲ್ಲಿ ಯೋಜಿತ ರೂಪದಲ್ಲಿ ಪ್ರಗತಿಯಲ್ಲಿದೆ. ಮುಂದಿನ ವರ್ಷದ ಅರಂಭದಲ್ಲಿ ನಿಗದಿತ ವೇಳೆಗೆ ಯೋಜನೆ ಕಾರ್ಯ ಆರಂಭಿಸಲಿದೆ ಎಂದು ಅದಾನಿ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಗಳ ವಿಷಯದಲ್ಲಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಲ್ಲಿ ಅದಾನಿ ಸಮೂಹದ ವಿರುದ್ದ ಅಮೆರಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಡಿಎಫ್‌ಸಿ ಶ್ರೀಲಂಕಾ ಯೋಜನೆಗೆ ಅರ್ಧಿಕ ನೆರವು ನೀಡುವ ವಿಚಾರ ಗೊಂದಲದಲ್ಲಿತ್ತು. ಇದೇ ಹೊತ್ತಿಗೆ ಅದಾನಿ ಸಂಸ್ಥೆಯೇ ಸಾಲ ಪಡೆಯದಿರಲು ನಿರ್ಧರಿಸಿದೆ.

 

× Subscribe us