ಅಮೆರಿಕಾ ವಿದ್ಯಾರ್ಥಿ ವೀಸಾಗಳ ಮೇಲೂ ಕಣ್ಣಿಟ್ಟಿದೆ. ಹೊಸ ವೀಸಾ ದೊರೆಯವುದು ಇನ್ನೂ ಮುಂದೆ ಕಷ್ಟಕರವಾಗಲಿದೆ. ಇದೇ ಹೊತ್ತಿನಲ್ಲಿ ಈಗ ಅಲ್ಲಿರುವ ವಿದ್ಯಾರ್ಥಿಗಳಿಗೂ ಸಮಸ್ಯೆ ಎದುರಾಗುತ್ತಿದೆ. ಯುಎಸ್ಎಯಲ್ಲಿ ಉನ್ನತ ಶಿಕ್ಷಣದ ಕನಸು ಕಾಣುತ್ತಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಇದು ನಿರಾಸೆಯನ್ನುಂಟು ಮಾಡಿದೆ. ಟ್ರಂಪ್ಅಡಳಿತ ದೇಶದ ಭದ್ರತೆಯ ಹೆಸರಿನಲ್ಲಿ ಕೈಗೊಳ್ಳುತ್ತಿರುವ ನೀತಿಗಳು ಮುಖ್ಯವಾಗಿ ಭಾರತೀಯ ಉದ್ಯೋಗಾಸಕ್ತರು ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ಸಂಕಟವನ್ನು ತಂದಿಟ್ಟಿದೆ.
ಕಳೆದ ಆರು ತಿಂಗಳಲ್ಲಿ (2025 ರಲ್ಲಿ) ಅಮೆರಿಕವು ಸುಮಾರು 6,000 ಕ್ಕೂ ಹೆಚ್ಚು ವಿದ್ಯಾರ್ಥಿ ವೀಸಾಗಳನ್ನು ರದ್ದುಗೊಳಿಸಿದೆ. ಇದಕ್ಕೆ ಕಾರಣಗಳು ಹಲವು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಮರಳಿದ ನಂತರ ಅತ್ಯಂತ ಆಕ್ರಮಣಕಾರಿ ವಲಸೆ ಜಾರಿ ಕುರಿತ ಕ್ರಮಗಳಲ್ಲಿ ಇದು ಒಂದಾಗಿದೆ. ಈ ಕ್ರಮವು ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಜಾರಿಯನ್ನು ಗುರಿಯಾಗಿರಿಸಿಕೊಂಡಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ವಿದ್ಯಾರ್ಥಿಗಳ ವೀಸಾ ರದ್ದತಿ ಅಮರಿಕಾದಲ್ಲಿನ ವಿಶ್ವವಿದ್ಯಾಲಯಗಳನ್ನು ಅಸ್ಥಿರಗೊಳಿಸುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಗಾಬರಿಗೊಳಿಸಿದೆ ಕೂಡಾ.
ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಾರ, ಸರಿಸುಮಾರು 6,000 ವಿದ್ಯಾರ್ಥಿ ವೀಸಾಗಳು ,ಅವುಗಳಲ್ಲಿ ಹೆಚ್ಚಿನವು ಎಫ್ -1 ವೀಸಾಗಳು ಜನವರಿಯಿಂದ ರದ್ದುಗೊಂಡಿವೆ. ಅವುಗಳಲ್ಲಿ ಸುಮಾರು 4,000 ವೀಸಾಗಳು ಅಮೆರಿಕದಲ್ಲಿ ಅಪರಾಧಗಳನ್ನು ಎಸಗಿದ ಆರೋಪ ಹೊತ್ತಿರುವ ವಿದ್ಯಾರ್ಥಿಗಳಿಗೆ ಸಂಬಂಧಿಸಿವೆ, ಇದರಲ್ಲಿ ಹಲ್ಲೆ, ಬಂಧನಗಳು ಮತ್ತು ಕಳ್ಳತನ ಪ್ರಕರಣಗಳು ಸೇರಿವೆ.
ವಿದ್ಯಾರ್ಥಿಗಳ ಮಾತ್ರವಲ್ಲದೆ, ವಿವಿಧ ವರ್ಗಗಳಲ್ಲೂ ವೀಸಾ ರದ್ದತಿ ವ್ಯಾಪಕವಾಗಿ ಏರಿಕೆಯಾಗಿದೆ. 2025 ರಲ್ಲಿ ಇದುವರೆಗೆ ಸುಮಾರು 40,000 ವೀಸಾಗಳನ್ನು ರದ್ದುಪಡಿಸಲಾಗಿದೆ . ಇದು ಬೈಡನ್ ಆಡಳಿತದ ಅವಧಿಯಲ್ಲಿ ರದ್ದಾದ 16,000 ವೀಸಾಗಿಂತ ಎರಡು ಪಟ್ಟಾಗಿದೆ.
ಟ್ರಂಪ್ ಅಧಿಕಾರಕ್ಕೆ ಮರಳಿದ ನಂತರ ವಿದೇಶಿ ವಿದ್ಯಾರ್ಥಿಗಳ ಬಗ್ಗೆ ಕಠಿಣ ನಿಲುವನ್ನು ತಳೆದ ಪರಿಣಾಮ ಇದಾಗಿದೆ. ಕಳೆದ ಜನವರಿಯಲ್ಲಿ, ಟ್ರಂಪ್ ವಿದೇಶಿ ಪ್ರಜೆಗಳ ಪರಿಶೀಲನೆಯನ್ನು ಬಲಪಡಿಸುವಂತೆ ಫೆಡರಲ್ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದರು.
News @ your fingertips
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್
ಅದಾನಿ ರೈಟ್ ಇಶ್ಯೂ ಭಾರೀ ಬೇಡಿಕೆ