7 rupees

News @ your fingertips

ಅಮೆರಿಕದ ಕಮೋಷನ್ ಇಂಕ್ ಖರೀದಿಸಿದ ಟಾಟಾ

ಅಮೆರಿಕ ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಮೋನ್ ಇಂಕ್‌ನ ಶೇ. 51 ಪಾಲನ್ನು ಟಾಟಾ ಕಮ್ಯುನಿಕೇಷನ್ಸ್ ಖರೀದಿಸಿದೆ.
ಟಾಟಾ ಕಮ್ಯುನಿಕೇಷನ್ಸ್ (ನೆದರ್‌ಲ್ಯಾಂಡ್ಸ್) ಬಿ.ವಿ. ಮೂಲಕ ಸೋಮವಾರ ಕಮೋಷನ್ ಇಂಕ್‌ನ ಖರೀದಿ ಪ್ರಕ್ರಿಯೆ ನಡೆದಿದೆ. ಸುಮಾರು 227 ಕೋಟಿ ಮೌಲ್ಯದ ಈ ಸ್ವಾಧೀನ ಪ್ರಕ್ರಿಯೆ ಈಗ ಇರುವ ಹೂಡಿಕೆದಾರರಿಂದ ಷೇರುಗಳ ಖರೀದಿ ಮತ್ತು ಕಂಪನಿಗೆ ಹೊಸ ಬಂಡವಾಳವನ್ನು ಸೇರಿಸುವುದನ್ನು ಒಳಗೊಂಡಿದೆ ಎಂದು ಸ್ಟಾಕ್‌ಎಕ್ಸ್‌ಚೇಂಜ್‌ಗೆ ಸಲ್ಲಿಸಲಾದ ಹೇಳಿಕೆಯಲ್ಲಿ ವಿವರಿಸಲಾಗಿದೆ.
ಈ ಎಐ ಯುಗದಲ್ಲಿ ಗ್ರಾಹಕರ ಅನುಭವವನ್ನು ಮರು ವ್ಯಾಖ್ಯಾನಿಸುವ ಸಂಸ್ಥೆಯ ಪ್ರಯಾಣದಲ್ಲಿ ಈ ಸ್ವಾಧೀನ ಪ್ರಕ್ರಿಯೆಯೂ ಮಹತ್ವದ ಹೆಜ್ಜೆಯಾಗಿದೆ ಎಂದು ಟಾಟಾ ಕಮ್ಯುನಿಕೇಷನ್ಸ್ ಎಂಡಿ ಮತ್ತು ಸಿಇಒ ಎ. ಎಸ್ ಲಕ್ಷ್ಮಿನಾರಾಯಣನ್ ಹೇಳಿದ್ದಾರೆ.