News @ your fingertips
News @ your fingertips
ಆನ್ಲೈನ್ ಆಹಾರ ವಿತರಣೆಯ ಜನಪ್ರಿಯ ಕಂಪೆನಿ ಸ್ವಿಗ್ಗಿ 10 ಸಾವಿರ ಕೋಟಿ ನಿಧಿ ಸಂಗ್ರಹಿಸಲು ನಿರ್ಧರಿಸಿದೆ.
ನವೆಂಬರ್ 7ರಂದು ಕಂಪೆನಿಯ ಅಡಳಿತ ಮಂಡಳಿ ಸಭೆ ನಡೆಯಲಿದ್ದು , ಒಂದು ಅಥವಾ ಹೆಚ್ಚಿನ ಅರ್ಹ ವಿತ್ತೀಯ ಸಂಸ್ಥೆಗಳ (ಕ್ಯೂಐಪಿ ) ಮೂಲಕ 10,000 ಕೋಟಿ ನಿಧಿ ಸಂಗ್ರಹಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಕಂಪೆನಿ ಗುರುವಾರ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ವಿವರಣೆಯಲ್ಲಿ ತಿಳಿಸಿದೆ.
ಕಂಪನಿಯ ಮಂಡಳಿಯು ಸಾರ್ವಜನಿಕ ಅಥವಾ ಖಾಸಗಿ ನಿಧಿಗಳ ಮೂಲಕ ಬಂಡವಾಳ ಸಂಗ್ರಹಿಸುವುದನ್ನು ಪರಿಗಣಿಸಲಿದೆ. ಇದರಲ್ಲಿ ಒಂದು ಅಥವಾ ಹೆಚ್ಚಿನ ಅರ್ಹ ಸಂಸ್ಥೆಗಳ ನಿಯೋಜನೆ ಅಥವಾ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಅನುಮತಿಸಲಾದ ಇತರ ಯಾವುದೇ ವಿಧಾನಗಳನ್ನು ಪರಿಗಣಿಸಲಿದೆ.
ಅರ್ಹ ಹೂಡಿಕೆದಾರರಿಗೆ ಈಕ್ವಿಟಿ ಷೇರುಗಳು/ಸೆಕ್ಯುರಿಟಿಗಳಿಗಾಗಿ, 10,000 ಕೋಟಿಗಳನ್ನು ಮೀರದಂತೆ, ಒಂದು ಅಥವಾ ಹೆಚ್ಚಿನ ಕಂತುಗಳಲ್ಲಿ ಮತ್ತು ಅಥವಾ ಒಂದು ಅಥವಾ ಹೆಚ್ಚಿನ ವಿತರಯ ಮೂಲಕ ನಿಧಿ ಸಂಗ್ರಹಿಸುವುದು ಪರಿಗಣನೆಯಲ್ಲಿದೆ ಎಂದು ಸ್ವಿಗ್ಗಿ ವಿವರಣೆಯಲ್ಲಿ ಹೇಳಿದೆ.
.
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್
ಅದಾನಿ ರೈಟ್ ಇಶ್ಯೂ ಭಾರೀ ಬೇಡಿಕೆ