News @ your fingertips
News @ your fingertips
ನೈಋತ್ಯ ರೈಲ್ವೆ 2025ಅಕ್ಟೋಬರ್ ಅಂತ್ಯಕ್ಕೆ ಸರಕು ಸಾಗಣೆ ಕಾರ್ಯದಲ್ಲಿ ಹೊಸದೊಂದು ಮಹತ್ವದ ಮೈಲಿಗಲ್ಲು ದಾಖಲಿಸಿದೆ. ರೈಲ್ವೆ ಸರಕು ಸಾಗಣೆಯಲ್ಲಿ 421.25 ಕೋಟಿ ರೂ.ಆದಾಯ ಗಳಿಸಿದೆ. ಇದು ಹಿಂದಿನ ವರ್ಷ ( 2024) ಅದೇ ಅವಧಿಯಲ್ಲಿ ಗಳಿಸಿದ್ದ 382.79 ಕೋಟಿ ಆದಾಯಗಿಂತ ಶೇ.10.05 (38.46 ಕೋಟಿ) ಹೆಚ್ಚಾಗಿದೆ. ಈ ತಿಂಗಳಲ್ಲಿ ಲೋಡ್ ಮಾಡಲಾದ ಸರಕುಗಳು 4.168 ಮೆಟ್ರಿಕ್ ಟನ್ಗಳಾಗಿವೆ. ಹಿಂದಿನ ವರ್ಷ ಈ ಅವಧಿಯಲ್ಲಿ ಲೋಡ್ ಮಾಡಲಾದ ಸರಕು 3.660 ಮೆಟ್ರಿಕ್ ಟನ್ಗಳು.
ರೈಲ್ವೆಯ ಕೇಂದ್ರೀಕೃತ ಪ್ರಯತ್ನಗಳು, ಸುಧಾರಿತ ಲೋಡಿಂಗ್ ದಕ್ಷತೆ ಮತ್ತು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗೋವಾದಾದ್ಯಂತ ಕೈಗಾರಿಕೆಗಳೊಂದಿಗೆ ಸಾಧಿಸಲಾದ ಸಮನ್ವಯ ಸರಕು ಸಾಗಾಟದಲ್ಲಿ ಮಹತ್ತರ ಬೆಳವಣಿಗೆಗೆ ನೆರವಾಗಿದೆ ಎಂದು ಪ್ರಕಟನೆ ತಿಳಿಸಿದೆ.
ನೈಋತ್ಯ ರೈಲ್ವೆ 2025-26ನೇ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ 2,999.27 ಕೋಟಿ ರೂ.ಸರಕು ಸಾಗಣೆ ಆದಾಯ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 2,408.12 ಕೋಟಿ ರೂ.ಗಳಾಗಿದ್ದು , ಶೇ. 24.55 ರಷ್ಟು (591.15 ಕೋಟಿ) ಅಧಿಕ ಅದಾಯ ಈ ಬಾರಿ ಸಾಧ್ಯವಾಗಿದೆ. ಒಟ್ಟಾರೆಯಾಗಿ, 2025-26 ರಿಂದ ಆರಂಭದಿಂದ ಅಕ್ಟೋಬರ್ ಅಂತ್ಯದವರೆಗೆ ಒಟ್ಟು 28.823 ಮೆಟ್ರಿಕ್ ಟನ್ ಸರಕು ಲೋಡ್ ಮಾಡಲಾಗಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಲೋಡ್ಆಗಿದ್ದ 24.399 ಮೆಟ್ರಿಕ್ ಟನ್ ಸರಕಿಗಿಂತ ಶೇ. 18.1ರಷ್ಟು ಅಧಿಕ.
– ಅಕ್ಟೋಬರ್ 2025ವರೆಗೆ ಪ್ರಯಾಣಿಕರ ಆದಾಯವು 310.51 ಕೋಟಿ ರೂ.ಗಳು. ಹಿಂದಿನ ಸಾಲಿಗಿಂತ ಶೇ. 15.82 ಹೆಚ್ಚಳ ದಾಖಲಿಸಿದೆ.
– ಅಕ್ಟೋಬರ್ 2025ರ ಪ್ರಯಾಣಿಕರ ಸಂಖ್ಯೆ 15.93 ಮಿಲಿಯನ್. ಅಕ್ಟೋಬರ್ 2024ಕ್ಕಿಂತ ಶೇ. 9.03 ಅಧಿಕ
– ಅಕ್ಟೋಬರ್ 2025ವರೆಗೆ ಟಿಕೆಟ್ ಪರಿಶೀಲನೆ ಗಳಿಕೆ 7.64 ಕೋಟಿ ರೂ. ಹಿಂದಿನ ಬಾರಿಗಿಂತ ಶೇ. 69.03 ಹೆಚ್ಚಳ..
ನೈಋತ್ಯ ರೈಲ್ವೆ ಒಟ್ಟು ಮೂಲ ಆದಾಯ 5,283.22 ಕೋಟಿ ರೂ.ಗಳಾಗಿದ್ದು , ಕಳೆದ ವರ್ಷದ ಇದೇ ಅವಧಿಯಲ್ಲಿ 4,588.11 ಕೋಟಿ ರೂ.ಗಳಾಗಿತ್ತು. ಶೇ. 15.15 ಹೆಚ್ಚುವರಿ ಗಳಿಕೆ ಸಾಧ್ಯವಾಗಿದೆ ಎಂದು ಪ್ರಕಟನೆಯಲ್ಲಿ ವಿವರಿಸಲಾಗಿದೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?