7 rupees

News @ your fingertips

ವಾರದಲ್ಲಿ 2300 ಕೋ. ಕಳೆದುಕೊಂಡ ರೇಖಾ ಜುಂಜುನ್‌ವಾಲಾ

ರಾಕೇಶ್ ಜುಂಜುನ್‌ವಾಲಾ ಅವರ ಹೆಸರು ಕೇಳದವರಿಲ್ಲ.ಭಾರತದ ಷೇರು ಮಾರುಕಟ್ಟೆಯಲ್ಲಿ,ಹೂಡಿಕೆಯಲ್ಲಿ ಅತಿ ದೊಡ್ಡ ಹೆಸರು ರಾಕೇಶ್ ಅವರದ್ದು. ಸದ್ಯ ಅವರ ಎಲ್ಲ ವ್ಯವಹಾರಗಳನ್ನು ಪತ್ನಿ ರೇಖಾ ಜುಂಜುನ್‌ವಾಲಾ ನೋಡಿಕೊಳ್ಳುತ್ತಿದ್ದಾರೆ.
ವಿಷಯ ಅದಲ್ಲ,
ಕಳೆದ ವಾರದಲ್ಲಿ ಷೇರು ಮಾರುಕಟ್ಟೆಯಲ್ಲಿ ಕಂಡ ಬಂದ ಭಾರಿ ಏರಿಳಿತಗಳು ಸಾಮಾನ್ಯ ಸಣ್ಣ ಅಲ್ಲ , ದೊಡ್ಡ ಹೂಡಿಕೆದಾರರನ್ನು ಅಲ್ಲಾಡಿಸಿ ಬಿಟ್ಟಿದೆ.
ಟೈಟನ್ ಜುಂಜುನ್‌ವಾಲಾ ಅವರ ಅತ್ಯಂತ ಪ್ರಿಯವಾದ ಸ್ಟಾಕ್. ಅಲ್ಲಿ ದೊಡ್ಡ ಹೂಡಿಕೆಯನ್ನು ಅವರು ಹೊಂದಿದ್ದಾರೆ.
ಕಳೆದ ನಾಲ್ಕೈದು ದಿನಗಳಲ್ಲಿನ ಏರಿಳಿತಕ್ಕೆ ಟೈಟನ್ ಸ್ಟಾಕ್ ಕೂಡಾ ಸುಮಾರು 497 ರೂ. ಕೆಳಗಿಳಿದೆ.ಬಿ3749 ರೂ. ಅಸುಪಾಸಿನಲ್ಲೇ ಓಡಾಡಿಕೊಂಡಿದ್ದ ಈ ಷೇರು 3252 ರೂ.ಗಳಿಗೆ ಇಳಿದೇ ಬಿಟ್ಟಿತು. ಮಾರುಕಟ್ಟೆಯಲ್ಲಿ ಇದು ಸಾಮಾನ್ಯ ಅಂದು ಕೊಳ್ಳಬಹುದು. ಅದರೆ ರೇಖಾ ಜುಂಜುನ್‌ವಾಲಾ ಅವರಿಗೆ ಬಿದ್ದ ಹೊಡೆತ ಎಂತಹದು ?
ಕಳೆದ ಮಾರ್ಚ್ 31ಕ್ಕೆ ರೇಖಾ ಜುಂಜುನ್‌ವಾಲಾ ಟೈಟನ್‌ನಲ್ಲಿ ಹೊಂದಿದ್ದ ಷೇರುಗಳ ಪ್ರಮಾಣ ಶೇ.5.35. ಷೇರುಗಳ ಲೆಕ್ಕ ತೆಗೆದುಕೊಂಡರೆ 4,74,83,470 . ಅಂದರೆ ಈ ಕುಸಿತದಿಂದ ಅವರಿಗೆ ಅದ ನಷ್ಟ 2300 ಕೋ.ರೂ.ಗಳು.
ಇದೇ ರೀತಿಯಲ್ಲಿ ಎಲ್‌ಐಸಿ ಕೂಡಾ 772 ಕೋ.ರೂ.ಗಳಷ್ಟು ಕಳೆದುಕೊಂಡಿದೆ.
ಇದು ತಾತ್ಕಾಲಿಕ ಕುಸಿತ ಅಂತ ತಿಳಿದುಕೊಂಡರೂ,ಷೇರು ಮಾರುಕಟ್ಟೆಯಲ್ಲಿ ಗಳಿಕೆ ಹಾಗೂ ನಷ್ಟ ಅಂದಾಜು ಮಾಡುವುದು ಬಹು ಕಷ್ಟ.

 

.

× Subscribe us