7 rupees

News @ your fingertips

ಯೆಸ್ ಬ್ಯಾಂಕ್ ಲಾಭ ಶೇ.123 ಜಿಗಿತ

ಕಳೆದ ಕೆಲವು ಸಮಯದಿಂದ ಹೂಡಿಕೆದಾರರ ಗಮನ ಸೆಳೆಯುತ್ತಿರುವ ಯೆಸ್ ಬ್ಯಾಂಕ್ ಈ ಬಾರಿಯ ಅಂತಿಮ ತ್ರೈಮಾಸಿಕದಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿದೆ.
2023-24ರ ಕೊನೆಯ ಮೂರು ತಿಂಗಳಲ್ಲಿ ಬ್ಯಾಂಕ್ 451 ಕೋ.ರೂ. ಲಾಭದ ಮೂಲಕ ಗಮನ ಸೆಳೆದಿದೆ.
ಕಳೆದ ಇದೇ ಸಾಲಿನಲ್ಲಿ ಬ್ಯಾಂಕ್ ಗಳಿಸಿದ್ದ ಲಾಭ 202 ಕೋ.ರೂ. ಅಂದರೆ ಲಾಭದಲ್ಲಿ ಶೇ.123 ರಷ್ಟು ಭರ್ಜರಿ ಜಂಪ್ ತೋರಿದೆ.
ಕಳೆದ ಬಾರಿ 2105 ಕೋ.ರೂ. ಒಟ್ಟು ಬಡ್ಡಿ ಅದಾಯ ಗಳಿಸಿದ್ದರೆ , ಈ ಸಾಲಿನಲ್ಲಿ 2153 ಕೋ.ರೂ. ಅದಾಯ ಪಡೆದಿದೆ.
ಹಿಂದಿನ ಸಾಲಿನಲ್ಲಿದ್ದ ಒಟ್ಟು ಅನುತ್ಪಾದಕ ಆಸ್ತಿ ಶೇ.2.2, ಅದು ಶೇ.1.7ಕ್ಕೆ ಇಳಿದಿದೆ. ಈ ತ್ರೈಮಾಸಿಕದಲ್ಲಿ ನಿವ್ವಳ ಎನ್‌ಪಿಎ ಶೇ.0.80ರಿಂದ ಶೇ.0.6ಕ್ಕೆ ಇಳಿದಿದೆ.
ಬ್ಯಾಂಕ್ ಸಾಲ ನೀಡಿಕೆಯಲ್ಲಿ ಶೇ.13.8ರಷ್ಟು ಬೆಳವಣಿಗೆಯನ್ನು ಸಾಧಿಸಿರುವುದು ಕೂಡಾ ಗಮನಾರ್ಹವಾಗಿದೆ.
ಕೆಲವು ವರ್ಷಗಳ ಹಿಂದೆ ಸಂಕಷ್ಟ ಸ್ಥಿತಿಯಲ್ಲಿದ್ದ ಯೆಸ್ ಬ್ಯಾಂಕ್‌ಗೆ ಎಸ್‌ಬಿಐ ಹಾಗೂ ಇನ್ನಿತರ ಬ್ಯಾಂಕ್‌ಗಳು ಹೂಡಿಕೆಯ ಮೂಲಕ ಮರು ಜೀವ ಕೊಡಲು ಪ್ರಯತ್ನಿಸಿದ್ದವು. ಆಡಳಿತ ಮಂಡಳಿಯ ಬದಲಾವಣೆ ಜೊತೆಯಲ್ಲಿ ಹೊಸ ಪ್ರಯೋಗಗಳು ಕೂಡಾ ಬ್ಯಾಂಕ್ ಮತ್ತೆ ತನ್ನ ಹಳೆಯ ಪಥೆಕ್ಕೆ ಬರಲು ಕಾರಣವಾಗಿದೆ. ನಷ್ಟದಲ್ಲಿದ್ದ ಬ್ಯಾಂಕ್ ಮತ್ತೆ ಉತ್ತಮ ಲಾಭದತ್ತ ಸಾಗುತ್ತಿರುವುದು ಹೂಡಿಕೆದಾರರ ನಂಬಿಕೆಯನ್ನು ಗಟ್ಟಿಗೊಳಿಸಿದೆ.

× Subscribe us