7 rupees

News @ your fingertips

ಮಾರುಕಟ್ಟೆ ಏರಿಳಿತಕ್ಕೆ ಚುನಾವಣಾ ಫಲಿತಾಂಶ ಅನಿಶ್ಚಿತತೆಯೇ ಕಾರಣ: ಮಾರ್ಕ್ಸ್ ಮೊಬಿಯಸ್

ಸದ್ಯ ಷೇರು ಮಾರುಕಟ್ಟೆಯ ಏರಿಳಿತಗಳಿಗೆ ಚುನಾವಣಾ ಫಲಿತಾಂಶದ ಅನಿಶ್ಚಿತತೆಯೆ ಕಾರಣ ಎಂದು ಖಾತ್ಯ ಹೂಡಿಕೆದಾರ ಮಾರ್ಕ್ಸ್ ಮೊಬಿಯಸ್ ಅಭಿಪ್ರಾಯಿಸಿದ್ದಾರೆ.
ಜನರು ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.ಜೊತೆಯಲ್ಲಿ ಚುನಾವಣಾ ಪ್ರಕ್ರಿಯೆಗಳ ಮೇಲೂ ಅವರ ನಿಗಾವಿದೆ. ಚುನಾವಣೆ ಪ್ರಕ್ರಿಯೆಗಳಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳ್ಳುವ ಕಾರಣಗಳಿಗೆ ಅವರಿಗೆ ಅವರದ್ದೆ ಆದ ಕುತೂಹಲಗಳಿವೆ. ಫಲಿತಾಂಶ ಬಗ್ಗೆ ಈಗ ಅನಿಶ್ಚಿತತೆ ಮಾತುಗಳು ಕೇಳಿ ಬರುವ ಕಾರಣ, ಅದು ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಖಾಸಗಿ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶದಲ್ಲಿ ವಿವರಿಸಿದ್ದಾರೆ.
ಮಾರುಕಟ್ಟೆಯಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳು ಹೂಡಿಕೆದಾರರಿಗೆ ಒಳ್ಳೆಯ ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ. ಮಾರುಕಟ್ಟೆ ಭಾವನಾತ್ಮಕವಾಗಿ ವರ್ತಿಸುತ್ತಿದ್ದರೆ, ಹೂಡಿಕೆದಾರರು ಅದಕ್ಕೆ ವಿರುದ್ದ ಕ್ರಮಗಳಿಗೆ ಮುಂದಾಗಬೇಕು. ಎಲ್ಲರೂ ಮಾರಾಟ ಪ್ರವೃತ್ತಿ ತಳೆದರೆ , ನಾವು ಖರೀದಿಯತ್ತ ಮುಖ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಬುದ್ದಿವಂತಿಕೆಗಿಂತ, ಭಾವನಾತ್ಮಕ ಪ್ರತಿಕ್ರಿಯೆಗಳೇ ಜಾಸ್ತಿ. ಹೂಡಿಕೆದಾರ ಇಂತಹ ಭಾವನಾತ್ಮಕ ಅಂಶಗಳನ್ನು ಗಮನಿಸಬೇಕು, ಜೊತೆಯಲ್ಲಿ ಮಾರುಕಟ್ಟೆಯಲ್ಲಿ ಸಮೂಹದ ವರ್ತನೆ ಯಾವ ರೀತಿಯಲ್ಲಿದೆ ಎನ್ನುವುದನ್ನು ಅರಿಯುವ ಪ್ರಯತ್ನ ಮಾಡಬೇಕು. ಅದನ್ನು ಬಳಸಿಕೊಂಡು ಸಕಾಲದಲ್ಲಿ ಹೂಡಿಕೆಯ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಮಾರುಕಟ್ಟೆ ಹಾಗೂ ಆರ್ಥಿಕ ಬೆಳವಣಿಗೆ ಬಗ್ಗೆ ಆಶಾವಾದ ವ್ಯಕ್ತಪಡಿಸಿರುವ ಮೊಬಿಯಸ್, ಮುಂದಿನ ಪ್ರಗತಿಗಾಗಿ ಭಾರತ ವಿದೇಶಿ ತಂತ್ರಜ್ಞಾನ ಹೂಡಿಕೆಗೆ ಹೆಚ್ಚಿನ ಒತ್ತು ನೀಡಬೇಕು.ಭಾರತ ತಂತ್ರಜ್ಞಾನ ಮೂಲಸೌಕರ್ಯ, ಉತ್ಪಾದನೆಯ ಹಬ್ ಆಗಲು ಸಾಧ್ಯವಿದೆ.ಆದರೆ ಅದು ಹೇಗೆ ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ ಎನ್ನುವುದು ಮುಖ್ಯ ಎಂದು ವಿವರಿಸಿದರು.

× Subscribe us