News @ your fingertips
News @ your fingertips
ಉದ್ಯೋಗಿಗಳ ಸಣ್ಣ ಸಣ್ಣ ಸಾಧನೆಗಳು ಹೇಗೆ ಮತ್ತಷ್ಟು ಕೆಲಸ ಮಾಡಲು ನೆರವಾಗುತ್ತವೆ , ಉತ್ತೇಜಿಸುತ್ತವೆ ಎನ್ನುವುದಕ್ಕೆ ಬೆಂಗಳೂರಿನ ಕಾರ್ಪೋರೇಟ್ ಕಚೇರಿಯಲ್ಲಿ ನಡೆದ ಒಂದು ಘಟನೆ ಎಲ್ಲರಿಗೂ ಮಾದರಿಯಾಗಿದೆ.
ಐಶ್ಚರ್ಯ ಬೆಂಗಳೂರಿನ ಕಾರ್ಪೋರೇಟ್ ಕಂಪೆನಿಯೊಂದರ ಉದ್ಯೋಗಿ. ಆಕೆಯ ಮ್ಯಾನೇಜರ್ ಮತ್ತು ಸಹೋದ್ಯೋಗಿಗಳು ಐಶ್ಚರ್ಯ ಸಾಧಿಸಿರುವ ಪುಟ್ಟ ಮೈಲಿಗಲ್ಲನ್ನು ಬಹುವಾಗಿ ಸಂಭ್ರಮಿಸಿದ್ದಾರೆ. ಅದರ ವಿಡಿಯೋ ಈಗ ಪುಲ್ ವೈರಲ್.
ಐಶ್ವರ್ಯ ತನ್ನ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಸಣ್ಣ ವಿಡಿಯೋ ಕ್ಲಿಪ್ 2,000 ಫಾಲೋವರ್‌ಗಳನ್ನು ಗಳಿಸಲು ನೆರವಾಗಿದೆ. ಈ ಸಂಭ್ರಮವನ್ನು ಕಚೇರಿಯ ಸಿಬಂದಿಗಳು ಅತ್ಯಂತ ಸಂತಸದಿಂದ ಆಚರಿಸಿದ್ದಾರೆ. ಇದು ಈಗ ಅನ್‌ಲೈನ್‌ನಲ್ಲಿ ಎಲ್ಲರ ಮೆಚ್ಚಿಗೆ ಪಾತ್ರವಾಗಿದೆ.
ಐಶ್ವರ್ಯ ತನಗೆ ಏನೂ ಅರಿವಿಲ್ಲದೆ ಕಚೇರಿ ಕೋಣೆಗೆ ಪ್ರವೇಶಿಸುತ್ತಾರೆ. ಕ್ಯಾಬೀನ್‌ನಲ್ಲಿ ಬಾಸ್ ಮತ್ತು ಇತರ ಸಹೋದ್ಯೋಗಿಗಳು ಕುಳಿತಿರುತ್ತಾರೆ. ಮೇಜಿನ ಮೇಲೆ ಕೇಕ್ ಇರಿಸಲಾಗಿದೆ. ಅದರ ಹಿಂದೆ ಬಳಿ ಬೋರ್ಡ್ ಮೇಲೆ , ‘2 ಸಾವಿರ ಫಾಲೋವರ್ ಹೊಂದಿರುವುದಕ್ಕೆ ಅಭಿನಂದನೆಗಳು, ಅಶು’ ಎನ್ನುವ ಅಭಿಮಾನದ ಮಾತುಗಳಿವೆ.
ಇದ್ಯಾದವುದನ್ನು ನಿರೀಕ್ಷಿಸದ ಐಶ್ವರ್ಯ ಆಶ್ಚರ್ಯಚರಿತರಾಗುತ್ತಾರೆ.
ಅವರ ಮಾತಿನಲ್ಲೇ ಹೇಳುವುದಾದರೆ , ‘ಇಂತಹ ಹುರಿದುಂಬಿಸುವ , ಪ್ರತಿ ಹಂತದಲ್ಲೂ ಪ್ರೋತ್ಸಾಹಿಸುವ ಬಾಸ್‌ಗಳಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ ’.
ಬಹುಶ: ಇದು ಎಲ್ಲರಿಗೂ ಮಾದರಿಯಾದ ಕ್ರಮ ಆಲ್ಲವೇ ….
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ವೆನಿಜುವೆಲಾದ ಮೇಲೆ ದಾಳಿ