7 rupees

News @ your fingertips

ಮತ್ತೆ ಲಾಭದ ಹಾದಿಗೆ ತಲುಪಿದ ಎಂಆರ್‌ಪಿಎಲ್

ಒಎನ್‌ಜಿಸಿ ಸ್ವಾಮ್ಯದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) 2025-26 ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಗಮನಾರ್ಹ ಆರ್ಥಿಕ ಚೇತರಿಕೆ ಕಂಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಎಂಆರ್‌ಪಿಎಲ್ 682 ಕೋಟಿ ರೂ. ನಷ್ಟ ಅನುಭವಿಸಿತ್ತು. ಕಂಪೆನಿ ಉತ್ತಮ ಕಾರ್ಯನಿರ್ವಹಣೆ ಅಥಇರಕ ಪ್ರಗತಿಗೆ ದೊಡ್ಡ ಕೊಡುಗೆಯನ್ನು ನೀಡಿದೆ.ಪ್ರಸಕ್ತ ತ್ರೈಮಾಸಿಕದಲ್ಲಿ 639 ಕೋಟಿ ರೂ. (ತೆರಿಗೆ ಬಳಿಕ )ಲಾಭ ದಾಖಲಿಸಲು ಅದು ನೆರವಾಗಿದೆ.
ಕಾರ್ಯಾಚರಣೆಯಲ್ಲಿನ ದಕ್ಷತೆ ಮತ್ತು ಕಚ್ಚಾತೈಲ ಸಂಗ್ರಹಣೆಗೆ ಹೆಚ್ಚಿನ ಒತ್ತು ಚೇತರಿಗೆ ಪ್ರಮುಖ ಕಾರಣಗಳು. ಕಳೆದ ವರ್ಷ ಇದೇ ಅವಧಿಯಲ್ಲಿ 1,041 ಕೋಟಿ ರೂ.(ತೆರಿಗೆ ಮುನ್ನ ) ಹೊಂದಿದ್ದ ನಷ್ಟವನ್ನು ಈ ಬಾರಿ ಲಾಭವಾಗಿ ಪರಿವರ್ತಿತವಾಗಿದ್ದು . 975 ಕೋಟಿ ರೂ. (ತೆರಿಗೆ ಮುನ್ನ ) ಲಾಭಗಳಿಸಲು ಸಾಧ್ಯವಾಗಿದೆ.
ಕಂಪೆನಿಯ ಒಟ್ಟು ಕಾರ್ಯನಿರ್ವಹಣಾ ಅದಾಯ 25,953 ಕೋಟಿ ರೂ.ಗಳಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧವಾರ್ಷಿಕ ಕಾರ್ಯಕ್ಷಮತೆಯೂ ಉತ್ತಮವಾಗಿದೆ. 617 ಕೋಟಿ ರೂ.( ತೆರಿಗೆ ಮುನ್ನ ) ನಷ್ಟದಿಂದ ಹೊರಬಂದು 367 ಕೋಟಿ ರೂ. ಲಾಭ ಗಳಿಸಲು ಸಾಧ್ಯವಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ಎಂಆರ್‌ಪಿಎಲ್ ಮೊದಲ ಬಾರಿಗೆ ಕುವೈತ್ ನ್ಯೂಟ್ರಲ್ ಝನ್‌ನಿಂದ ನ್ಯೂ ಕ್ರೂಡ್ ಹೌಟ್ ಕಚ್ಚಾತೈಲವನ್ನು ಯಶಸ್ವಿಯಾಗಿ ಸಂಸ್ಕರಿಸಿದೆ. ಇದಲ್ಲದೆ ದೇವನಗೊಂಥಿ ಟರ್ಮಿನಲ್‌ನಿಂದ ಸೆಪ್ಟೆಂಬರ್‌ದಲ್ಲಿ ದಾಖಲೆ ಪ್ರಮಾಣದ 65.40 ಟಿಕೆಎಲ್ ಸರಕು ರವಾನೆಯಾಗಿದೆ.
.