7 rupees

News @ your fingertips

Supporters of the Bangladesh Nationalist Party (BNP) attack armed vehicles of police at Shonir Akhra area, during their sit-in rallies on the main entry points of the capital Dhaka, Bangladesh, July 29, 2023. REUTERS/Mohammad Ponir Hossain TPX IMAGES OF THE DAY

ಬಾಂಗ್ಲಾ ನಿಲ್ಲದ ಹಿಂಸಾಚಾರ , ಪ್ರಧಾನಿ ರಾಜೀನಾಮೆ

ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದು , ಜೊತೆಯಲ್ಲಿ ದೇಶವನ್ನು ತೊರೆದಿದ್ದಾರೆ.
ಸದ್ಯದ ಮಾಹಿತಿಯಂತೆ ಹಸೀನಾ ಅವರು ಹೊಸದಿಲ್ಲಿ ತಲುಪಿದ್ದು , ಅಲ್ಲಿಂದ ಬೇರೆ ದೇಶಗಳಲ್ಲಿ ಅಶ್ರಯ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಬಾಂಗ್ಲಾ ದೇಶದಲ್ಲಿ ಭಾನುವಾರ ಭುಗಿಲೆದ್ದ ಪ್ರತಿಭಟನೆ ಸೋಮವಾರ ಮತ್ತಷ್ಟು ಬಿರುಸು ಪಡೆದ ಹಿನ್ನಲೆಯಲ್ಲಿ ಶೇಖ್ ಹಸೀನಾ ಪ್ರಧಾನಿ ಪದಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ 15 ವರ್ಷಗಳ ಅವರ ಅಧಿಕಾರ ಕೊನೆಗೊಂಡಿದೆ.
ಬಾಂಗ್ಲಾ ದಲ್ಲಿ ಸರಕಾರಿ ಉದ್ಯೋಗ ಕೋಟಾ ವಿರೋಧಿ ಜನರು ಪ್ರತಿಭಟನೆ ಆರಂಭಿಸಿದ್ದರು. ಈ ಪ್ರತಿಭಟನೆ ಮಿತಿ ಮೀರಿ , ಹಿಂಸೆಗೆ ತಿರುಗಿದ್ದು ಭಾನುವಾರ 93 ಮಂದಿ ಸಾವನ್ನಪ್ಪಿದ್ದರು.
ಸೋಮವಾರವೂ ಹಿಂಸಾಚಾರ ಮುಂದುವರಿದಿದ್ದು , ಒಟ್ಟು ಸುಮಾರು 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಿಂಸಾಚಾರ ನಿಲ್ಲದ ಹಿನ್ನಲೆಯಲ್ಲಿ ಹಸೀನಾ ರಾಜೀನಾಮೆ ನೀಡಿ , ಸುರಕ್ಷಿತ ತಾಣಕ್ಕೆ ಹೋಗಲು ಬಯಸಿದ್ದಾರೆ ಎನ್ನಲಾಗಿದೆ.
ಈ ವಿದ್ಯಮಾನಗಳ ನಡುವೆ ಬಾಂಗ್ಲಾ ದಲ್ಲಿ ಹಂಗಾಮಿ ಪ್ರಧಾನಿ ನೇಮಕಕ್ಕೆ ಪ್ರಕ್ರಿಯೆಗಳು ನಡೆದಿವೆ.