News @ your fingertips
News @ your fingertips
ಭವಿಷ್ಯ ನಿಧಿ ಖಾತೆದಾರರಿಗೆ ಪ್ರತಿ ವರ್ಷ ಕ್ರೋಢಿಕೃತವಾಗುವ ಮೊತ್ತಕ್ಕೆ ಬಡ್ಡಿಯನ್ನು ಜಮಾ ಮಾಡಬೇಕಿರುವ ಕಾರಣಕ್ಕೆ ಮೊತ್ತವನ್ನು ಸಂಪೂರ್ಣ ಹಿಂಪಡೆಯುವ ಅವಧಿಯನ್ನು ಕನಿಷ್ಠ 12 ತಿಂಗಳುಗಳಿಗೆ ನಿಗದಿಪಡಿಸಲಾಗಿದೆ.
ಇದುವರೆಗೆ ಈ ಅವಧಿ 2 ತಿಂಗಳಿಗೆ ಇಳಿಸಲಾಗಿತ್ತು. ಇನ್ನೂ ಮುಂದೆ 12 ತಿಂಗಳ ನಂತರ ಮಾತ್ರ ಖಾತೆಯಲ್ಲಿನ ಪೂರ್ಣ ಮೊತ್ತ ಹಿಂಪಡೆಯಲು ಸಾಧ್ಯವಾಗುತ್ತದೆ. ಆಗ ಮಾತ್ರ ಖಾತೆದಾರರಿಗೆ ಕನಿಷ್ಠ ಒಮ್ಮೆಯಾದರೂ ತಮ್ಮ ಮೊತ್ತಕ್ಕೆ ಬಡ್ಡಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಳೆದ ವಾರವಷ್ಟೇ ಭವಿಷ್ಯ ನಿಧಿ ಮಂಡಳಿ ಸಭೆಯಲ್ಲಿ ಶೇ. 25 ಮೊತ್ತವನ್ನು ಕನಿಷ್ಠ ಬ್ಯಾಲೆನ್ಸ್ ಆಗಿ ಉಳಿಸಿ , ಶೇ.75ರಷ್ಟನ್ನು ಹಿಂಪಡೆಯಲು ಅನುಮತಿ ನೀಡಿತ್ತು.
ಉದಾಹರಣೆಗೆ, ಖಾತೆದಾರರು ತಮ್ಮ ಖಾತೆಯಲ್ಲಿ 20,000 ರೂ.ಗಳನ್ನು ಸಂಗ್ರಹಿಸಿದರೆ, ಆ ವ್ಯಕ್ತಿ ನಿರುದ್ಯೋಗದ ಒಂದು ವರ್ಷದವರೆಗೆ ಕೇವಲ 15000 ರೂ.ಗಳನ್ನು ಹಿಂಪಡೆಯಬಹುದು. ಈ ಅವಧಿಯಲ್ಲಿ, ನಿಧಿಯಲ್ಲಿ ಉಳಿದಿರುವ ರೂ. 5000 ರೂ. ಮೊತ್ತಕ್ಕೆ ಬಡ್ಡಿದರವನ್ನು ನಿಧಿಯಿಂದ ಜಮಾ ಮಾಡಲಾಗುತ್ತದೆ ಎಂದು ಅಧಿಕಾರಿ ವಿವರಿಸಿದರು.
ಭವಿಷ್ಯ ನಿಧಿ ಸಂಸ್ಥೆ ಹೇಳಿರುವ ಪ್ರಕಾರ , ಶೇ. 50 ರಷ್ಟು ಖಾತೆದಾರರು ಅಂತಿಮ ಇತ್ಯರ್ಥ ಸಂಧರ್ಭದಲ್ಲಿ ಖಾತೆಯಲ್ಲಿ 20,000 ರೂ.ಗಿಂತ ಕಡಿಮೆ ಮೊತ್ತ ಹೊಂದಿರುತ್ತಾರೆ. ಜೊತೆಯಲ್ಲಿ ಖಾತೆದಾರರು ತಾವು ಪ್ರಯೋಜನ ಪಡೆಯಬಹುದಾದ ಯಾವುದೇ ನಿಧಿಯನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಈ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ. ಹಾಗಾಗಿ ಖಾತೆದಾರರಿಗೆ ನೆರವಾಗುವ ದೃಷ್ಟಿಯಿಂದ ಸಮಯಸೂಚಿಗಳನ್ನು ಪರಿಷ್ಕರಿಸಲಾಗಿದೆ ಅವರು ವಿವರಿಸಿದ್ದಾರೆ..
ಸಂಸ್ಥೆಯ ಪ್ರಕಾರ ಇಪಿಎಫ್ಒದ ಒಟ್ಟು ನಿಧಿ 26 ಲಕ್ಷ ಕೋಟಿ ರೂಪಾಯಿಗಳು. ಒಟ್ಟು ಸಕ್ರಿಯರಾಗಿರುವ ಖಾತೆದಾರರು ಸುಮಾರು 7.5 ಲಕ್ಷ ಜನ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?